ತಾಯಿಯಂತೆ ಮಗಳು ನೂಲಿನಂತೆ ಸೀರೆ ! ಇದು ಯುಗಯುಗಗಳಿಂದ ರೂಢಿಯಲ್ಲಿರುವ ಮಾತು. ಈಗ ನಮ್ಮ ಮುದ್ದು ಗೌರಿ ಅದನ್ನು ಸಾಬೀತು ಪಡಿಸುವಲ್ಲಿ ತೊಡಗಿರುವಂತೆ ಭಾಸವಾಗುತ್ತಿದೆ. ಅದೇನೋ ಅತ್ತೆ-ಸೊಸೆ ಎಂದಿಗೂ ತಾಯಿ ಮಗಳಾಗಲು ಸಾಧ್ಯವಿಲ್ಲವೇನೋ, ಎನ್ನುವಂತೆ ವರ್ತಿಸುತ್ತಾರೆ. ಆದರೆ ತಾಯಿ ಮಗಳು ಮಾತ್ರ ಅದೇನು ಅನ್ಯೋನ್ಯತೆ, ಹೊಂದಾಣಿಕೆ, ತನ್ನ ಮಗಳು ಏನೇ ತಪ್ಪು ಮಾಡಿದರು ಅದನ್ನು ಸೀರೆಗೆ ಒರೆಸಿಕೊಂಡು ಅವಳ ಪರವಹಿಸುವ ತಾಯಿ, ಹಾಗೆಯೇ ಅಮ್ಮನನ್ನು ಒಪ್ಪಕ್ಕಿಟ್ಟುಕೊಂಡು ಮಾತಾಡುವ ಮಗಳು ವಿಶ್ವದಾದ್ಯಂತ ಸಿಕ್ಕುತ್ತಾರೆ. ಆದರೆ ತಂದೆ ಮಗನ ಮಾತೇ ಬೇರೆ. ಮತ್ತೆ ತಂದೆ ಮಗಳ ಅನ್ಯೋನ್ಯತೆ ಸರ್ವಮಾನ್ಯ. ಇನ್ನು ಮಗಳೋ ತಾಯಿಮನೆ ಗಂಡನಮನೆಯನ್ನು ಬೆಸೆಯುವ ಒಂದು ಭದ್ರವಾದ ಕೊಂಡಿ ! ಅವಳಿರುವ ಜಾಗದಲ್ಲಿ ವೈಮನಸ್ಯತೆ ಇಲ್ಲ. ಪ್ರೀತಿ, ಸೌಹಾರ್ದ, ಹೊಂದಾಣಿಕೆಗಳು ವಿಪುಲವಾಗಿ ಕಾಣಿಸಿಕೊಂಡು ನೆಮ್ಮದಿ ವಿಶ್ವಾಸಗಳ ತಾಣವಾಗಿ ಮೆರೆಯುತ್ತವೆ. ಇದು ಸರ್ವೇ ಸಾಮಾನ್ಯವಾದ ಮಾತು ! ಇದು ನಮ್ಮ ಮುದ್ದು ಗೌರಿ ಮತ್ತು ಅವರ ಪ್ರೀತಿಯ ಅಮ್ಮ ಹರ್ಷರ ಜೊತೆಗೂಡಿ ತೆಗೆದ ಫೋಟೋ ! (ನಾವು ನೋಡಿದ ಮೊದಲ ಫೋಟೋ) ಇದೇ ತರಹದ ಫೋಟೋ ಅಪ್ಪನ ಜೊತೆಯಲ್ಲಿ, ಗೆಳತಿಯರ ಜೊತೆಯಲ್ಲಿ, ಅಂಕಲ್ ಆಂಟಿ ಜೊತೆಯಲ್ಲಿ ಇದ್ದರೆ, ಕಳಿಸು. ಇಲ್ಲಿ ಹಾಕುತ್ತೇನೆ
Comments