Posts

Showing posts from August, 2017

Shri. Chitradurga Mahadev Bhatt, Bombay's one of the Great Yoga teachers during 1950s to 1980s !

Image
Shri. Chitradurga Mahadev Bhatt. Bombay's one of the Great Yoga teachers during 1950s to 1980s ! ಪ್ರಸಿದ್ಧ ಯೋಗಾಚಾರ್ಯ, ಹಾಗೂ ಸಂಸ್ಕೃತ  ಪಂಡಿತರಾಗಿದ್ದ  ಚಿತ್ರದುರ್ಗ ಮಹಾದೇವ ಭಟ್  , 'ಸಿ. ಎಂ. ಭಟ್,' ಎಂದೇ  ತಮ್ಮ ಗೆಳೆಯರಿಗೆ ಹಾಗೂ  ಸಹೋದ್ಯೋಗಿಗಳಿಗೆ ಚಿರ ಪರಿಚಿತರಾಗಿದ್ದರು.   ಚಿತ್ರದುರ್ಗ  ಮಹದೇವ್ ಭಟ್ಟರು, ಗುಂಡಾ ಭಟ್ಟರ ೬ ಜನ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. ಗಂಡು ಮಕ್ಕಳು : ೧. ಪುರುಷೋತ್ತಮ್  ಜೋಯಿಸ್, ೨. ಮಹಾದೇವ್ ಜೋಯಿಸ್, ೩. ಶ್ರೀನಿವಾಸ್ ಜೋಯಿಸ್,  ಹೆಣ್ಣು ಮಕ್ಕಳು : ೧. ಶಾರದಮ್ಮ, ೨. ಮೀನಾಕ್ಷಮ್ಮ ೩. ರತ್ನಮ್ಮ.   ಗುಂಡಾ ಭಟ್ಟರು ಚಿತ್ರದುರ್ಗ ಮತ್ತು ಹತ್ತಿರದ ಗ್ರಾಮಗಳಲ್ಲಿ ಪೌರೋಹಿತ್ಯವನ್ನು ತಮ್ಮ ವೃತ್ತಿಯಾಗಿ ಪಾಲಿಸುತ್ತಿದ್ದರು. ಅವರು ಸಂಸ್ಕೃತ ಹಾಗೂ ಜ್ಯೋತಿಷ ಶಾಸ್ತ್ರದಲ್ಲಿ ಪ್ರಕಾಂಡ ಪಂಡಿತರು.  ಮಹಾದೇವ ಜೋಯಿಸ್ ರವರಿಗೆ  ಮಹದೇವ್ ಭಟ್ಟರೆಂದು ಹೆಸರು ಬರಲು ಕಾರಣ;    ಇದಕ್ಕೆ ಒಂದು ಚಿಕ್ಕ ಕತೆಯಿದೆ. ಮಹಾದೇವ ಜೋಯಿಸ್ ತಮ್ಮ ೧೨ ನೆಯ ವಯಸ್ಸಿನಲ್ಲೇ ಸಂಸ್ಕೃತ ಕಲಿಯಲು ಮೈಸೂರಿನ ಸಂಸ್ಕೃತ ಪಾಠಶಾಲೆಗೆ ಸೇರಿಕೊಂಡರು. ಅಲ್ಲಿ ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದ ತರುವಾಯ ಮೈಸೂರಿನ ರಾಜಮನೆತನದ ಸಂಸ್ಕೃತ ವಿದ್ಯಾಶಾಲೆಗಳಲ್ಲಿ ಶಿಕ್ಷಕರಾಗಿ ಸೇರಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಸಮಯದಲ್ಲಿ ಕೃಷ್ಣಮಾಚಾರ್ಯರೆಂಬ ಯೋಗ ಗುರುಗಳು ಉತ್ತರಭಾರತದಿಂದ ಮ