Posts

Showing posts from December, 2009

ನನ್ನ ಬಾಲ್ಯದ ದಿನಗಳ ವಿವರಗಳು, ನನ್ನಷ್ಟೆ ಅವ್ಯವಸ್ಥಿತ !

Image
ಚಿತ್ರದಲ್ಲಿ ಮುಂದಿನ ಸಾಲಿನಲ್ಲಿ ಕುಳಿತ ವ್ಯಕ್ತಿಗಳು : ಶ್ರೀ . ಎಚ್. ಆರ್. ರಾಮಕೃಷ್ಣರಾವ್, (ನನ್ನ ಅಣ್ಣ) ಶ್ರೀ. ಪ್ರೊ. ಜಿ. ಪಿ. ರಾಜರತ್ನಂ, ಮತ್ತು ಇನ್ನೊಬ್ಬರು. (ಅವರ ಹೆಸರು ತಿಳಿಯದು) ಬೆಂಗಳೂರಿನ ಸೆಂಟ್ರೆಲ್ ಕಾಲೇಜ್ ನಲ್ಲಿ ಆಗ, ಅತ್ಯಂತ ಹೆಸರಾಗಿದ್ದ, ’ ಸೆಂಟ್ರೆಲ್ ಕಾಲೇಜ್ ಕರ್ನಾಟಕ ಸಂಘ,’ ದಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಯಾದ ನಮ್ಮಣ್ಣ, ರಾಮಕೃಷ್ಣ, ಅಲ್ಲಿನ ಎಲ್ಲ ಪ್ರೊಫೆಸರ್ ಗಳ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದವ ! ಪ್ರೊ. ಜಿ. ಪಿ. ರಾಜರತ್ನಂ, ಪ್ರೊ. ವೀ. ಸಿ. ಅವನ ಪ್ರೀತಿಯ ಗುರುಗಳು ! ಅವರ ಪ್ರಭಾವ ಎಷ್ಟು ಮೈಗೂಡಿಸಿಕೊಂಡಿದ್ದ ಎಂದರೆ, ತಾನು ರಾಜರತ್ನಂ, ಮತ್ತು ವೀ. ಸಿಯವರ ಜಾಗಗಳಲ್ಲಿ ನಿಂತು ಏನಾದರೂ ಹೇಳುತ್ತಿದ್ದಂತೆ, ಅವನು ಭಾವಿಸುತ್ತಿದ್ದ. ಕಂಚಿನ ಕಂಠ ! ಮಾತಿನ ಏರಿಳಿತ, ಮತ್ತು ಗಾಂಭೀರ್ಯ ಮುಂತಾದವುಗಳು ಅವನ ಮೇಲೆ ಅಚ್ಚು ಹೊಯ್ದಂತೆ ನಮಗೆ ಕಾಣಿಸುತ್ತಿತ್ತು. ಇಂದಿಗೂ ಅವನು ಏನಾದರೂ ನಮ್ಮ ಮುಂದೆ ಹೇಳಲು ಕುಳಿತರೆ, ಅದೆಷ್ಠು ಮನಮೋಹಕವಾಗಿ ಹೇಳುತ್ತಾನೋ, ನಮಗಂತೂ ಅವನ ಮಾತು ಕೇಳಲು ಅತಿ ಕಾತುರ ! ಈಗ ಹೃದಯದ ಒಂದೆರಡು ಶಸ್ತ್ರ ಕ್ರಿಯೆಗಳು ಆಗಿದ್ದು, ಡಾ. ಮಾತನಾಡಲು ಬಿಡ್ದಿದೄ  ಹುಟ್ಟುಗುಣ .... ಕೇಳಬೇಕಲ್ಲ... ನಮ್ಮಮ್ಮ ಹೇಳ್ದಂಗೆ, ಅವನ್ ಬಂಡ್ವಾಳ ಎಲ್ಲಾ ಅವ್ನ ಮಾತ್ನೊಳ್ಗೆ ಅಲ್ವೆ ?  ಒನ್ನೊಂದ್ ಸರಿ, ಸರಿನ ಸುಳ್ಳು ಅನ್ಸೊಮಟ್ಟಿಗೆ ಹೇಳೋನು. ನಾವೇನಾದರು, ಸುಳ್ಳು ಅನ್ನೊ ವಿಷ್ಯನ ತಿಳಿಸಿ