Posts

Showing posts from May, 2010

’ಪ್ರಭಾತ್ಪೇರಿ’ ಗಾಗಿ, ನಾವು, ಓರಿಗೆಯವರೆಲ್ಲಾ, ಬೆಳಗಿನಿಂದ ಕಾದಿರುತ್ತಿದ್ದೆವು !

೧೯೪೪ ರಲ್ಲಿ, ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ನಾನು ಮತ್ತು ನನ್ನ ತಮ್ಮ ಚಂದ್ರ, ’ಪ್ರಭಾತ್ ಪೇರಿ ಮೆರವಣಿಗೆ ’ಯನ್ನು ಅತಿ ಹತ್ತಿರದಿಂದ ನೋಡಿದ ಪುಣ್ಯವಂತರು. ಆಗ ಎಲ್ಲರಲ್ಲೂ ದೇಶಭಕ್ತಿ, ದೇಶದ ಬಗ್ಗೆ ಅಪಾರಪ್ರೇಮ ಜಾಗೃತವಾಗಿದ್ದ ಕಾಲವದು. ಜನರೆಲ್ಲಾ ಸಾಧ್ಯವಾದಷ್ಟು ಉತ್ತಮವಾದ ನ್ಯಾಯಯುತವಾದ ಕೆಲಸಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬರುವ ಆದಾಯದಲ್ಲೇ ಹೆಚ್ಚು ಆಸೆಪಡದೆ ಜೀವನ ನಿರ್ವಹಣೆ ಮಾಡುತ್ತಿದ್ದ ಕಾಲ. ಅವರೆಲ್ಲಾ ಅಲ್ಪತೃಪ್ತರು. ತಮಗೆ ಬೇಕಾದಷ್ಟನ್ನು ಮಾತ್ರ ಉಪಯೋಗಿಸಿ ಯಾವ ವಸ್ತುವನ್ನೂ ಮನೆಯಲ್ಲಿ ಅತಿಯಾಗಿ ಶೇಖರಿಸದೆ ಸ್ವಚ್ಛ-ಜೀವನಾಪೇಕ್ಷಿಗಳಾಗಿದ್ದರು. ನನಗೆ ಜ್ಞಾಪಕವಿದ್ದಂತೆ, ನನ್ನ ಬಾಲ್ಯದ ದಿನಗಳಲ್ಲೂ ಸ್ವಾತಂತ್ರ್ಯದಿನದಂದು, ಮತ್ತು ಗಣರಾಜ್ಯದಿನದಂದು,  ’ಮಹಾತ್ಮಾ ಗಾಂಧೀಕಿ ಜೈ’, ’ಭಾರತ್ ಮಾತಾಕಿ ಜೈ’ ಎನ್ನುವ ಕೂಗಿನಿಂದ ರಸ್ತೆಗಳಲ್ಲಿ ಬೆಳಗಿನ ವೇಳೆಯಲ್ಲಿ ಬರುವ ’ಪ್ರಭಾತ್ಪೇರಿ’  ಮೆರವಣಿಗೆಯನ್ನು ನಾವು ಕಾತುರದಿಂದ ವೀಕ್ಷಿಸಲು ಸಿದ್ದರಾಗುತ್ತಿದ್ದೆವು.  ಚಿಕ್ಕ ಪಲ್ಲಕ್ಕಿಯಲ್ಲಿ, ರಾಷ್ಟ್ರನಾಯಕರಾಗಿದ್ದ, ಬಾಲಗಂಗಾಧರ್ ತಿಲಕ್, ಗೋಪಾಲಕೃಷ್ಣ ರಾನಡೆ, ಬಾಬು ರಾಜೇಂದ್ರ ಪ್ರಸಾದ್, ಮತ್ತು ಜವಹರ್ ಲಾಲ್  ನೆಹರೂ ರವರ ಚಿತ್ರಪಟಗಳನ್ನಿಟ್ಟು ಅವಕ್ಕೆ ಹಾರಹಾಕುತ್ತಿದ್ದರು. ’ಹೊರಘೋಗಿ ನೋಡೋ ’ಪ್ರಭಾತ್ಪೇರಿ’ ಬಂತೇನೊ’ ಎಂದು ಕೆಲವು ಹಿರಿಯರು ಹಾಗೂ ನಮ್ಮಮ್ಮನೂ ಆಸಕ್ತಿತೋರಿಸಿದ ದಿನಗಳವ...

" ಮಹಾ ಕೊಲೆಪಾತಕಿ, ಗೋವಿಂದನೂ, ಅವನಿಗೆ ಲಭಿಸಿದ ಸಾಯುಜ್ಯವೂ " !

ಬಾಲ್ಯದಲ್ಲಿ ’ನಾಟಕವಾಡುವ ಹುಚ್ಚು,” ನಮಗೆ ಹೇಗೆ ಬಂತು ಎನ್ನುವುದು, ಇಂದಿಗೂ ನಮಗೆ ತಿಳಿಯದ ಸಂಗತಿ. ನಾಟಕವಾಡುವ ಕಲೆ ಅಷ್ಟು ಸುಲಭಸಾಧ್ಯವಲ್ಲವೆನ್ನುವುದು, ಆಗಲೇ ನಮಗೆ ಹೇಗೋ ತಿಳಿದುಹೋಯಿತು.  ನಮ್ಮ ಗೋಪಾಲರಾವ್ ಮೇಷ್ಟ್ರ ಚಿತ್ರಕಲೆಯ ಪ್ರಭಾವ ನನ್ನಮೇಲೆ ಗಾಢವಾದ ಪ್ರಭಾವ ಆಗಿತ್ತು. ಆಗಾಗ ಯಾವುದಾದರೂ ಕಥೆಪುಸ್ತಕದಿಂದ ಕೆಲವು ನನಗಿಷ್ಟವಾದ ಚಿತ್ರಗಳನ್ನು ಪ್ರಯತ್ನ ಪೂರ್ವಕವಾಗಿ ನಕಲು ಮಾಡುವ ಪ್ರಯತ್ನದಲ್ಲಿ ಸ್ವಲ್ಪ ಜಯಶೀಲನಾಗಿದ್ದೆ. ಆದರೆ, ನಾನೇ ನೆನೆಪಿನಿಂದ ಕೆಲವು ದಿನನಿತ್ಯದ ಸಂಗತಿಗಳನ್ನು ಚಿತ್ರರೂಪದಲ್ಲಿ ಬಿಳಿಕಾಗದದ ಮೇಲೆ ತರುವಲ್ಲಿ ಅಸಮರ್ಥನಾಗಿದ್ದದ್ದನ್ನು ಗಮನಿಸಿದ್ದೆ. ಆದರೆ ನಾನು ಬರೆದ ಚಿತ್ರಗಳು, ಉದಾಹರಣೆಗೆ, ಕಾಳಿಂಗಮರ್ದನ, ಕೃಷ್ಣ ರಾಧೆಯರದು, ನಮ್ಮ ಮನೆಯವರ ಮೇಲೆ ಒಳ್ಳೆಯ ಅಭಿಪ್ರಾಯವನ್ನೇ ಮೂಡಿಸಿತ್ತು. ವ್ಯಂಗ್ಯ-ಚಿತ್ರಗಳ ಕಡೆಗೆ ನನ್ನ ಮನಸ್ಸು ವಾಲಿದ್ದು, ರಾಶಿಯವರ, ’ಕೊರವಂಜಿ ನಗೆಪತ್ರಿಕೆ ’ಯನ್ನು ಓದಲು ತೊಡಗಿದಾಗ, ಅದರ ಮುಖಪುಟದ ವಿನ್ಯಾಸವನ್ನು ಆರ್. ಕೆ. ಲಕ್ಷ್ಮಣ್ ಅಧ್ಬುತವಾಗಿ ಬರೆದಿದ್ದರು. ಹೀಗೆ ನನ್ನ ಮನಸ್ಸು ಕೆಲವು ಆಯಾಮಗಳ ಕಡೆಗೆ ವಾಲಿದ್ದು,  ಚಿತ್ರಕಲೆ ಮತ್ತು  ಚಿತ್ರಕಲೆಯಲ್ಲೇ ಒಂದು ವಿಶೇಷ ಪ್ರಕಾರವಾದ, ಮತ್ತು ಭಾರತದೇಶದಲ್ಲಿ ಆಗತಾನೇ ಪ್ರಸಿದ್ಧಿಗೆ ಬರುತ್ತಿದ್ದ, ವ್ಯಂಗ್ಯ ಚಿತ್ರಕಲೆಗಳಲ್ಲಿ  ನಾನು ಏನಾದರೂ ಹೊಸದನ್ನು ಸುಲಭವಾಗಿ ನಿರ್ಮಿಸಲಾರೆ ಎನ್ನುವುದನ್ನ...

’ ಬಾಲ್ಯದ ದಿನಗಳಲ್ಲಿ, ಹೊಳಲ್ಕೆರೆಯಲ್ಲಿ ನಾವುಕಂಡ, ಮದುವೆ ದಿಬ್ಬಣಗಳು !

ಮದುವೆಗಳು ಯಾವಾಗಲೂ ಅದ್ಧೂರಿಯಿಂದ ನಡೆಯುತ್ತವೆ. ಹಳ್ಳಿಯಿರಲಿ, ದಿಳ್ಳಿಯಿರಲಿ ; ಜನ, ತಮ್ಮ ಮಕ್ಕಳ ವಿವಾಹವನ್ನು ಸಾಧ್ಯವಾದಷ್ಟು ಮಟ್ಟಿಗೆ ಚೆನ್ನಾಗಿಯೇ ಮಾಡಿಕೊಡುತ್ತಾರೆ. ಈಗಲೂ ಭಾರತದಲ್ಲೇ ಅತಿಹೆಚ್ಚಿನ ಬಂಗಾರದ ಒಡವೆಗಳ ಬಳಕೆಯಾಗುತ್ತಿದೆ. ಸಾಲಮಾಡಿಯಾದರೂ ಅತಿ-ಹೆಚ್ಚು ಖರ್ಚುಮಾಡುವ ಅಭ್ಯಾಸವೂ ಭಾರತದ ಮಧ್ಯಮವರ್ಗದ ಮನೆಗಳಲ್ಲಿ ಇಂದಿಗೂ ಬಳಕೆಯಲ್ಲಿವೆ. ಆದ್ರೂ ಸ್ವಲ್ಪ ಸಣ್ಣ-ಪುಟ್ಟ ತೃಟಿಗಳು ಬರುವುದು ಸಹಜ. ’ಎಷ್ಟು ಗಾಡಿ ನೆಂಟರು’ ಬಂದಿದ್ದರು ಎನ್ನುವುದರಮೇಲೆ, ಮದುವೆಯ ಸಂಭ್ರಮಗಳು, ಏರ್ಪಾಟುಗಳು, ಅವಲಂಬಿಸಿರುತ್ತದೆ. ಯಾರನ್ನು ಕೇಳಿದರೂ ’ಮಾಲ್ದಿ’ ಮಾಡಿದ್ವಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ, ಮದುವೆ ದಿಬ್ಬಣದ ಮೆರವಣಿಗೆ-ಗಾಡಿ ಬರೋದು. ನಾವು ಚಪ್ಪಲಿ ಹಾಕಿಕೊಂಡು ”ಟಪ್-ಟಪ್ ’ಶಬ್ದ ಮಾಡುತ್ತಾ ಮನೆಯ ಒಳಗಿನಿಂದ ಹೊರಗೆ ನಡೆದು ಬರುತ್ತಿದ್ದೆವು. ಕಗ್ಗತ್ತಲ ರಾತ್ರಿಯಲ್ಲಿ, ಲಾಟೀನು ಹಿಡಿದು ಬರುವುದು ಒಳ್ಳೆಯದು ; ಹುಳ-ಹುಪ್ಪಟಗಳ ಕಾಟ ಯಾವಾಗಲೂ ಇರ್ತಿತ್ತು. ಹೊರಗಿನ ತಲೆಬಾಗಿಲನ್ನು  ಪೂರ್ತಿಯಾಗಿ ತೆರೆದು ಕಲ್ಲಿನ ಮೆಟ್ಟಿಲಿನ ಮೇಲೊ ಅಥವಾ ಕಟ್ಟೆಯಮೇಲೊ ಲಾಟೀನು ಇಡುತ್ತಿದ್ದೆವು. ಮದು-ಮಕ್ಕಳ ಹೆಸರು ಹೇಳಿಸುವಶಾಸ್ತ್ರ, ಅಲ್ಲಿ ಅತಿ-ಮುಖ್ಯವಾದದ್ದು. ಅದೇ ಒಂದು ಸಂಪ್ರದಾಯವೆನ್ನಬೇಕು. ಇಬ್ಬರೂ ಹೆಸರು ಹೇಳಲು ನಾಚಿಕೆಪಟ್ಟುಕೊಳ್ಳೋರು. ಹಿರಿಯರು, ಮತ್ತು ಬಳಕೆಯ ಸ್ನೇಹಿತರು ಹೇ...
Image

’ನಮ್ಮ ಮನೆಯ ಹಿತ್ತಲಿನ ಏಳುಸುತ್ತಿನ-ಮಲ್ಲಿಗೆ ಹೂವಿನ ಕಥೆ’ !

ಹೊಳಲ್ಕೆರೆಯ  ನಮ್ಮ ಮನೆಯ ಹಿತ್ತಲಿನಲ್ಲಿನ ಗಿಡಗಳನ್ನು ನೆನೆಸಿಕೊಳ್ಳದೆ ವಿಧಿಯಿಲ್ಲ. ಆ ಹಿತ್ತಲಿನಲ್ಲಿ ಯಾವ ಗಿಡಗಳು ಬೆಳೆದಾವು, ಎಂದು ಹೇಳುತ್ತಿದ್ದ ದಿನಗಳು ಇದ್ದವು. ಆದರೆ, ಅದೇ ಹಿತ್ತಲಿನಲ್ಲಿ ನಾವು ರಾಶಿರಾಶಿ, ಪುಟ್ಟಿಗಟ್ಟಲೆ ಮಲ್ಲಿಗೆ ಹೂವು, ಅಂಜೂರ, ಹತ್ತಿ, ತಿಂಗಳ ಹುರುಳಿಕಾಯಿ, ದಬ್ಬಗಾಯಿ, ಹಾಗಲಕಾಯಿ, ಬದನೆಕಾಯಿ, ದಂಟಿನ ಸೊಪ್ಪು, ಮನ್ಯವರೇಕಾಯಿ, ತರಕಾರಿಗಳನ್ನು ಬೆಳೆಯುತ್ತಿದ್ದೆವು ಎಂದು ಹೇಳಿದರೆ, ಯಾರೂ ನಂಬುವುದಿಲ್ಲ.ನಮ್ಮ ಹಿತ್ತಲಿನಲ್ಲಿ,  ಅಮ್ಮ ಮುಸುರೆ ಪಾತ್ರೆಗಳನ್ನು  ಕುಳಿತುಕೊಂಡು ತೊಳೆಯಲು ಅನುಕೂಲವಾಗುವಂತಹ  ಒಂದು ಬಂಡೆಯನ್ನು ಹಾಕಿಸಿಕೊಂಡಿದ್ದಳು. ಬಟ್ಟೆ ಒಗೆಯಲು ಮತ್ತೊಂದು ದೊಡ್ಡ ಇಳಿಜಾರಾಗಿ ಹೊಂದಿಸಿದ್ದ ಬಂಡೆಯಿತ್ತು. ನಾವು ಬಳಸುತ್ತಿದ್ದದ್ದು ನಮ್ಮ ಮನೆಯ ಅಂಗಳದಲ್ಲಿದ್ದ ಭಾವಿಯ ಉಪ್ಪುನೀರನ್ನು. ಆದರೆ ಅಮ್ಮ ಮಲ್ಲಿಗೆ ಬಳ್ಳಿಗೆ ಮಾತ್ರ ಸಿಹಿ-ನೀರನ್ನು ಹೊಂಡದಿಂದ ತಂದು ಹಾಕುತ್ತಿದ್ದರು. ಹೊಂಡವೇನು ಕಡಿಮೆ ದೂರವಿತ್ತೆ. ಸುಮಾರು ಒಂದೂವರೆ ಮೈಲಿದೂರ ನಡೆದೇ ಹೋಗಬೇಕು. ಅಲ್ಲಿಂದ ಅರ್ಧ ಮೈಲಿ ನಡೆದರೆ, ಪೇಟೆ ಭಾವಿ. ಆಭಾವಿಯ ಸಕ್ಕರೆಯಂತ ನೀರನ್ನು  ಕುಡಿಯಲಿಚ್ಛಿಸುವವರು, ಅಲ್ಲಿಗೆ ಹೋಗಿ ಆಳವಾದ ಭಾವಿಯಲ್ಲಿ ಚಿಕ್ಕ ಚೊಂಬನ್ನು ಬಿಟ್ಟು ಅದರಲ್ಲಿ ಮಗೆದು ಮಗೆದು ಕೊಡಕ್ಕೆ ನೀರು ತುಂಬಿಸಬೇಕಾಗಿತ್ತು. ಅಂತಹ  ಉಪ್ಪುಮಣ್ಣಿನಲ್ಲಿ ಎರಡು ಅಂಜೂರದ ಮರಗಳು ಹೇಗೆ ಬೆಳೆದು ಹ...

How much we know our roots ?

Image
        ನಮ್ಮ ಮನೆ ಹಾಗೂ  ಪೂರ್ವಜರ ಬಗ್ಗೆ ಎಷ್ಟು ನಮಗೆ ತಿಳಿದಿದೆ ?                                  How much we know our, roots ? ಅಪ್ಪ : Appa was born on, 11th, December, 1895, 'Manmathanama Samvatsara.' Margashira .Bahula Dashami, (Wednesday2), at Holalkere.  He was highly religious, and self taught man. He learnt languages like Telugu, Marathi, Sanskrit, and studied, the books of Astrology, of several noted authors, in English, Telugu, and Kannada, languages. He had the mastery on these languages, and able to read, talk and write articles. Appa, purchased one Gramaphone record player (HMV) in 1932, when he was working in Bombay. This has been recorded in his Diary. Anandji vora was the name of the firm, which was famous during those days. Now, that store is still there ; but they have diversified their business.. ಅಮ್ಮ : ( Amma   born, at Bengaluru, on, 16 th ,...