’ಪ್ರಭಾತ್ಪೇರಿ’ ಗಾಗಿ, ನಾವು, ಓರಿಗೆಯವರೆಲ್ಲಾ, ಬೆಳಗಿನಿಂದ ಕಾದಿರುತ್ತಿದ್ದೆವು !
೧೯೪೪ ರಲ್ಲಿ, ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ನಾನು ಮತ್ತು ನನ್ನ ತಮ್ಮ ಚಂದ್ರ, ’ಪ್ರಭಾತ್ ಪೇರಿ ಮೆರವಣಿಗೆ ’ಯನ್ನು ಅತಿ ಹತ್ತಿರದಿಂದ ನೋಡಿದ ಪುಣ್ಯವಂತರು. ಆಗ ಎಲ್ಲರಲ್ಲೂ ದೇಶಭಕ್ತಿ, ದೇಶದ ಬಗ್ಗೆ ಅಪಾರಪ್ರೇಮ ಜಾಗೃತವಾಗಿದ್ದ ಕಾಲವದು. ಜನರೆಲ್ಲಾ ಸಾಧ್ಯವಾದಷ್ಟು ಉತ್ತಮವಾದ ನ್ಯಾಯಯುತವಾದ ಕೆಲಸಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬರುವ ಆದಾಯದಲ್ಲೇ ಹೆಚ್ಚು ಆಸೆಪಡದೆ ಜೀವನ ನಿರ್ವಹಣೆ ಮಾಡುತ್ತಿದ್ದ ಕಾಲ. ಅವರೆಲ್ಲಾ ಅಲ್ಪತೃಪ್ತರು. ತಮಗೆ ಬೇಕಾದಷ್ಟನ್ನು ಮಾತ್ರ ಉಪಯೋಗಿಸಿ ಯಾವ ವಸ್ತುವನ್ನೂ ಮನೆಯಲ್ಲಿ ಅತಿಯಾಗಿ ಶೇಖರಿಸದೆ ಸ್ವಚ್ಛ-ಜೀವನಾಪೇಕ್ಷಿಗಳಾಗಿದ್ದರು. ನನಗೆ ಜ್ಞಾಪಕವಿದ್ದಂತೆ, ನನ್ನ ಬಾಲ್ಯದ ದಿನಗಳಲ್ಲೂ ಸ್ವಾತಂತ್ರ್ಯದಿನದಂದು, ಮತ್ತು ಗಣರಾಜ್ಯದಿನದಂದು, ’ಮಹಾತ್ಮಾ ಗಾಂಧೀಕಿ ಜೈ’, ’ಭಾರತ್ ಮಾತಾಕಿ ಜೈ’ ಎನ್ನುವ ಕೂಗಿನಿಂದ ರಸ್ತೆಗಳಲ್ಲಿ ಬೆಳಗಿನ ವೇಳೆಯಲ್ಲಿ ಬರುವ ’ಪ್ರಭಾತ್ಪೇರಿ’ ಮೆರವಣಿಗೆಯನ್ನು ನಾವು ಕಾತುರದಿಂದ ವೀಕ್ಷಿಸಲು ಸಿದ್ದರಾಗುತ್ತಿದ್ದೆವು. ಚಿಕ್ಕ ಪಲ್ಲಕ್ಕಿಯಲ್ಲಿ, ರಾಷ್ಟ್ರನಾಯಕರಾಗಿದ್ದ, ಬಾಲಗಂಗಾಧರ್ ತಿಲಕ್, ಗೋಪಾಲಕೃಷ್ಣ ರಾನಡೆ, ಬಾಬು ರಾಜೇಂದ್ರ ಪ್ರಸಾದ್, ಮತ್ತು ಜವಹರ್ ಲಾಲ್ ನೆಹರೂ ರವರ ಚಿತ್ರಪಟಗಳನ್ನಿಟ್ಟು ಅವಕ್ಕೆ ಹಾರಹಾಕುತ್ತಿದ್ದರು. ’ಹೊರಘೋಗಿ ನೋಡೋ ’ಪ್ರಭಾತ್ಪೇರಿ’ ಬಂತೇನೊ’ ಎಂದು ಕೆಲವು ಹಿರಿಯರು ಹಾಗೂ ನಮ್ಮಮ್ಮನೂ ಆಸಕ್ತಿತೋರಿಸಿದ ದಿನಗಳವು ! ಹಿಂದಿ ಭಾಷೆಯಲ್ಲಿ