ಆರತಿ ಬೆಳಗಿರೆ ನಾರಿಮಣಿಯರು, ನಮ್ಮ ಮುದ್ದು ರಂಗಗೆ, ....ಮುದ್ದು ಅನೀಶಗೆ !

ದೊಡ್ಡಮ್ಮನ  ಆಶಿರ್ವಾದ  ನಿನಗಿರಲಿ ಎಲೆ ಕಂದ !

ಮೊದಲ ದೀಪಾವಳಿಯ ಸಂಭ್ರಮವಿದೆ, ನೀನೀಗ ನಮ್ಮ ಮನೆಯ ದೀಪ, ಅಳುವನಿಲ್ಲಿಸಿ ನಗು ನಗುತ ಮಲಗು ಮಗುವೆ !

ಈ ಕೃಷ್ಣನ ಜೋಗುಳದ ಹಾಡು ಎಷ್ಟು ಚೆನ್ನಾಗಿದೆಯಲ್ಲವೇ !


Link : http://www.youtube.com/watch?v=GQdkjg4zgqU#t=16


ಜಯ ಜನಾರ್ಧನ ಕೃಷ್ಣ ರಾಧಿಕಾಪತೇ
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ

ಸುಜನ ಬಾಂಧವ ಕೃಷ್ಣ ಸುಂದರ ಕೃತೆ
ಮದನ ಕೋಮಲ ಕೃಷ್ಣ ಮಾಧವ ಹರೇ
ವಸುಮತಿ ಪತೇ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ

ಸುರಚಿರಾನನ ಕೃಷ್ಣ ಶೌರ್ಯವಾರಿಧೆ
ಮುರಹರ ವಿಭೋ ಕೃಷ್ಣ ಮುಕ್ತಿದಾಯಕ
ವಿಮಲಪಾಲಕ ಕೃಷ್ಣ ವಲ್ಲಭಿಪತೆ
ಕಮಲಲೋಚನಾ ಕೃಷ್ಣ ಕಾಮ್ಯದಾಯಕ

ವಿಮಾಲಗಾತ್ರನೇ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಮ್
ಕುವಲೈಕ್ಷಣ ಕೃಷ್ಣ ಕೋಮಲಾಕೃತೆ
ತವ ಪದಾಮ್ಬುಜಂ ಕೃಷ್ಣ ಶರಣಾಮಾಶ್ರಯೆ

ಭುವನ ನಾಯಕ ಕೃಷ್ಣ ಪಾವನಾಕೃತೆ
ಗುಣಗಣೋಜ್ವಲಾ ಕೃಷ್ಣ ನಳಿನಲೋಚನ
ಪ್ರಣಯವಾರಿಧೆ ಕೃಷ್ಣ ಗುಣಗಣಾಕರ
ದಾಮಸೋದರ ಕೃಷ್ಣ ದೀನ ವತ್ಸಲ

ಕಾಮಸುಂದರ ಕೃಷ್ಣ ಪಾಹಿ ಸರ್ವಾದಾ
ನರಕನಾಶನ ಕೃಷ್ಣ ನರಸಹಾಯಕ
ದೇವಕಿಸುತ ಕೃಷ್ಣ ಕಾರುಣ್ಯಾಂಭುದೇ
ಕಂಸಾನಾಶನ ಕೃಷ್ಣ ದ್ವಾರಕಾಸ್ಥಿತ

ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ
ತ್ವತ್ ಪದಾಮ್ಬುಜಂ ಕೃಷ್ಣ ಶ್ಯಾಮ ಕೋಮಲಮ್
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನೂ ಕೃಷ್ಣ ಶ್ರೀಹರಿ ನಮೋ

ಭಕ್ತದಾಸ ನಾ ಕೃಷ್ಣ ಹರಸು ನೀ ಸದಾ
ಕಾದು ನಿಂತೇನಾ ಕೃಷ್ಣ ಸಲಹೆಯಾ ವಿಭೋ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ








Comments

Popular posts from this blog

ತಾಯಿಯಂತೆ ಮಗಳು ನೂಲಿನಂತೆ ಸೀರೆ !

Shri. Chitradurga Mahadev Bhatt, Bombay's one of the Great Yoga teachers during 1950s to 1980s !

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !