ಪುಟಾಣಿ ಅನೀಶ್ ಗೆ ಅಜ್ಜನ ಆಶೀರ್ವಾದದ ಜೊತೆಗೆ, ಅಜ್ಜಿಯ ಶುಭಾಶೀರ್ವಾದಗಳು ಸಹಿತ !
ಬಹುದಿನದ ಹರಕೆಯ ನಂತರ ಮತ್ತೆ ಮನೆಯಲ್ಲಿ ಸಂತಸದ ಹೊನಲು ಹರಿಯುತ್ತಿದೆ !
ನಮ್ಮೆಲ್ಲರ ಶುಭ ಕಾಮನೆಗಳು !ಅಳುವ ಕಂದನ ತುಟಿಯು ಹವಳದ ಕುಡಿಹಂಗ
ಕುಡಿ ಹುಬ್ಬು ಬೆವಿನೆಸಳಂಗ/ಕಣ್ಣೋಟ
ಶಿವನ ಕೈಯಲಗು ಹೊಳೆದಂಗ
ಕೂಸೆಲ್ಲ ಕುಂದಣ ನೆತ್ತೆಲ್ಲ ಜಾವೂಳ
ಕಟ್ಟಿ ಕೆಳಗಾಡಿ ಬೆವತಾನ/ನನ ಬಾಲ
ಹೊಸ ಮುತ್ತಿನ ದೃಷ್ಟಿ ತಗದೇನ
ರಚ್ಚೆ ಏತಕೊ ನಿನದು
ಬೆಚ್ಚನೆ ಹಾಲ ಕುಡಿದು
ಮಲಗೋ ನೀನು ನನ ಕಂದ
ಮಲಗೋ ನೀನು ನನ ಕಂದ...
ಅಳುವ ನಿಲಿಸಿ ನೀನು
ಬಳಸಿ ನಡುವ, ಜೇನು
ನಿದ್ದೆಗೆ ಜಾರೋ ನನ ಕಂದ
ನಿದ್ದೆಗೆ ಜಾರೋ ನನ ಕಂದ...
ಮೆಲ್ಲನೆ ಬೆನ್ನನು ತಟ್ಟಿ
ಗಲ್ಲಕೆ ಮುದ್ದನು ಇಟ್ಟು
ಜೋಗುಳ ಹಾಡುವೆ ನನ ಕಂದ
ಜೋಗುಳ ಹಾಡುವೆ ನನ ಕಂದ...
ಓಡೋಡಿ ಬಳಿ ಬಂದು
ಉಡಿಯ ನುಸುಳಿ ಇಂದು
ಹಾಯಾಗಿ ಮಲಗೋ ನನ ಕಂದ
ಹಾಯಾಗಿ ಮಲಗೋ ನನ ಕಂದ...
ರಂಪಾಟ ಸಾಕಿನ್ನು
ಜೊಂಪಾಟವ ಆಡಿನ್ನು
ಸೊಂಪಾಗಿ ಮಲಗೋ ನನ ಕಂದ
ಸೊಂಪಾಗಿ ಮಲಗೋ ನನ ಕಂದ...
ಹಾಯಾಗಿ ಮಲಗೋ ನನ ಕಂದ...
ನಿದ್ದೆಗೆ ಜಾರೋ ನನ ಕಂದ...
ಬೆಚ್ಚನೆ ಮಲಗೋ ನನ ಕಂದ...
ಹಚ್ಚಗೆ ಮಲಗೋ ನನ ಕಂದ...
ಇದರಲ್ಲಿ ಯಾವ ಪದ್ಯವನ್ನಾದರು ಕಲಿತರೆ ಒಳ್ಳೆಯದು. ಒಟ್ಟಿನಲ್ಲಿ ಹಾಡು, ಕಥೆ ಹೇಳಿದರೆ, ಅದನ್ನೇ ಕೇಳುತ್ತಾ ಮಕ್ಕಳು ನಿದ್ದೆ ಹೋಗುತ್ತಾರೆ !
ತೊಟ್ಟಿಲು ತುಗುವಾಗ ಹಾಡುವ ಹಾಡು :
ಕೆಳಗಿನ ಲಾಲಿ ಹಾಡುಗಳು ಮಕ್ಕಳಿಗೆ ಬಲು ಪ್ರಿಯ : (ಈ ಹಾಡನ್ನು ಕೇಳಲು, ಲಿಂಕನ್ನು ಕತ್ತರಿಸಿ ಪೇಸ್ಟ್ ಮಾಡಿದರೆ ಕೇಳಿಸುತ್ತೆ)
* http://www.chidambarashrama.org/mp3/Puja_Krama/Laali_Laali_lo_jeevathma_Laali.mp3
* http://www.chidambarashrama.org/mp3/Morning/Elu%20Elayya%20paresha.mp3
Comments