ಮೈಸೂರು ಆಕಾಶವಾಣಿ ನಿಲಯದಲ್ಲಿ ಮೈಸೂರು ಹಬ್ಬದಾಚರಣೆ !
ಇದೇ ಮೊದಲು ಸಾರ್ವಜನಿಕರನ್ನು ಆಕಾಶವಾಣಿ ನಿಲಯದ ಒಳಗೆ ಬಿಡುತ್ತಿರುವುದು ; ಮೈಸೂರು ನಾಗರೀಕರು ಅತ್ಯಂತ ಸಂಭ್ರಮದಿಂದ ತಮ್ಮ ಪ್ರೀತಿಯ ಮೈಸೂರು ಆಕಾಶವಾಣಿ ನಿಲಯದ ಒಳ ಭಾಗದ ಕಾರ್ಯ ಚಟುವಟಿಕೆಗಳನ್ನು ಹತ್ತಿರದಲ್ಲಿ ನೋಡಲು ಕಾತುರರಾಗಿದ್ದಾರೆ.
-ಸುಮಾ ವಿಜಯಶಂಕರ್, ಎಂ. ಎಸ್ಸಿ.; ಬಿ. ಎಡ್
ಉಪನ್ಯಾಸಕರು , ಮ್ಯಾಥೆಮ್ಯಾಟಿಕ್ಸ್
ದಿನಾಂಕ ೧೮, ನವೆಂಬರ್, ೨೦೨೨ ರಂದು ಆಕಾಶವಾಣಿ ಮೈಸೂರು ಕೇಂದ್ರವು ತನ್ನ ನುಡಿಸೇವೆಯಲ್ಲಿ ೮೭ ವರ್ಷಗಳನ್ನು ಪೂರೈಸಿ, ೮೮ ನೇ ವರ್ಷಕ್ಕೆ ಮುನ್ನಡೆತಿದ್ದು 'ಕನ್ನಡ ಹಬ್ಬ'ವನ್ನು ಆಯೋಜಿಸಿತ್ತು. ಅದಕ್ಕೆ ನಾನೂ ಸಹಿತ ಹೋಗಿದ್ದೆ, ಎಂಬುದು ಸಂತಸದ ವಿಷಯ. ಹೋಗುತ್ತಿದ್ದಂತೆಯೇ ಅಲ್ಲಿ ಧ್ವನಿ ಮುದ್ರಣ ಮತ್ತು ಪ್ರಸಾರ ಸ್ಟುಡಿಯೋಗಳನ್ನು ವೀಕ್ಷಣೆ ಮಾಡಿದೆ.ಮೈಸೂರು ಆಕಾಶವಾಣಿ ಕಾರ್ಯಕ್ರಮ ಸಹಾಯಕರೂ ಮತ್ತು ಸಹಾಯಕ ನಿರ್ದೇಶಕರೂ ಆದ ಕೇಂದ್ರದ ಮುಖ್ಯಸ್ಥ ಶ್ರೀ. ಎಚ್. ಎಸ್ ಉಮೇಶ್ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರೆವೇರಿಸಿದರು. ನಂತರ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ, ಡಾ. ಎಂ. ಪುಷ್ಪಾವತಿ, ಜಿ. ಎಸ್.ಎಸ್. ಸಂಸ್ಥೆಯ ಶ್ರೀಹರಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜಶೇಖರ್, ಕದಂಬ ಮಹಾನ್ ಸಂಸ್ಥೆಯ ಏನ್. ಗುರುರಾಜ್, ಆಕಾಶವಾಣಿ ತಾಂತ್ರಿಕ ವಿಭಾಗದ ಸಹಾಯಕ ನಿರ್ದೇಶಕ , ರಾಮಾಂಜನಪ್ಪ, ಕಾರ್ಯಕ್ರಮ ನಿರ್ವಾಹಕರಾದ, ಎಸ್. ಸುಬ್ರಹ್ಮಣ್ಯ, ದಿವಾಕರ ಹೆಗಡೆ ಇನ್ನಿತರರು ಉಪಸ್ಥಿತರಿದ್ದರು.
ಅಲ್ಲಿ ನಾನು ಬರೀ ರೇಡಿಯೋ ಪ್ರಸಾರದಲ್ಲಿ ಹೆಸರುಗಳನ್ನು ಕೇಳುತ್ತಿದ್ದು ಸಿಬ್ಬಂದಿ ವರ್ಗದವರಲ್ಲೊಬ್ಬರಾದ ಶ್ರೀ. ಪ್ರಭುಸ್ವಾಮಿ ಮಳಿ ಮಟ್, ಚುರಿಮುರಿ ಮೀನಾಕ್ಷಿ ಉಮೇಶ್, ನಿತಿನ್ ಗಣೇಶ್ ಶಾಸ್ತ್ರಿ ಇನ್ನೂ ಮೊದಲಾದವರನ್ನು ನೋಡುವ ಮತ್ತು ಅವರೊಂದಿಗೆ ಛಾಯಾಚಿತ್ರ ತೆಗೆದುಕೊಳ್ಳುವ ಸೌಭಾಗ್ಯ ನನಗೆ ಸಿಕ್ಕಿತು. ನಂತರ ಆಕಾಶವಾಣಿಯ ಆವರಣದಲ್ಲಿ ಇದ್ದ ಉಚಿತ ಆರೋಗ್ಯ ತಪಾಸಣೆಯಮಳಿಗೆಗಳು, ಪುಸ್ತಕ ಮಳಿಗೆಗಳು, ಆಹಾರ ಮಳಿಗೆಗಳು ಮತ್ತು ಇನ್ನಿತರ ಸಾರ್ವಜನಿಕ ಮಾಹಿತಿಯ ಮಳಿಗೆಗಳಿದ್ದು ಅವುಗಳನ್ನು ವೀಕ್ಷಿಸಿ ಮಾಹಿತಿ ಪಡೆದೆ. ಮತ್ತು ನಮ್ಮ ಅನುಭವಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದು ಸಂತಸವಾಯಿತು. ಮೊದಲು ಸಿಬ್ಬಂದಿವರ್ಗದವರಿಂದ ನಾಡಗೀತೆ, ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶ್ರೀ ಪ್ರಭು ಎಲ್ಲರನ್ನೂ ಸ್ವಾಗತಿಸಿದರು. ನಂತರ ಗಣೇಶ ಶಾಸ್ತ್ರಿಯವರಿಂದ ಹಾಡುಗಳು, ಮತ್ತು ಶಕ್ತಿಧಾಮದ ಮಕ್ಕಳಿಂದ ಸುಮಧುರಗೀತೆ, ಸನ್ಮಾನಗಳು, ನಂತರ, ಸಿಬ್ಬಂದಿಯವರಿಗೆ ಅನೇಕ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು ಕಾರ್ಯಕ್ರಮ ನಿರೂಪಣೆ, ಶ್ರೀ ಉಮೇಶ್ ರಿಂದ.
ಮೈಸೂರು ಆಕಾಶವಾಣಿ ಕಾರ್ಯಾಲಯಕ್ಕೆ ಭೇಟಿಮಾಡಲು ಬಂದವರು :
ಈ ಚಾರಿತ್ರ್ಯಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನಗೆ ಅತ್ಯಂತ ಮುದಕೊಟ್ಟಿದೆ.
-ಶ್ರೀಮತಿ. ಕೆ. ಟಿ. ಸಾವಿತ್ರಮ್ಮ, ಎಂ. ಎ, ಬಿ. ಎಡ್
ನಿವೃತ್ತ ಸಹಾಯಕ ನಿರ್ದೇಶಕಿ, ಕೇಂದ್ರ ಸರ್ಕಾರೀ ಸಂಸ್ಥೆ,
ಬೆಂಗಳೂರು.
Comments