ಪ್ರೊ. ಎಚ್. ಆರ್. ರಾಮಕೃಷ್ಣರಾವ್ ರವರ 80 ನೆಯ ಜನುಮದಿನದ ಹಬ್ಬದ ವರದಿ !

ಪ್ರೊ. ಎಚ್. ಆರ್. ರಾಮಕೃಷ್ಣರಾಯರ  ೮೦ ನೆಯ ವರ್ಷದ ಜನುಮದಿನವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು !  

                                                  (೩೦ ನೆಯ  ಮೇ, ೨೦೧೫, ಬೆಂಗಳೂರಿನಲ್ಲಿ)


ದಕ್ಷಿಣ ಬೆಂಗಳೂರಿನ ಬಸವನಗುಡಿಯ ಪ್ರತಿಷ್ಥಿತ  ‘ಇಂಡಿಯನ್ ಇನ್ಸ್ಟಿ ಟ್ಯೂಟ್  ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ’ದಲ್ಲಿ ೨೦೧೫ ರ ಮೇ ತಿಂಗಳ ೩೦ ರಂದು ಆಯೋಜಿಸಲಾಗಿದ್ದ  'ಪ್ರೊ. ಎಚ್. ಆರ್. ರಾಮಕೃಷ್ಣರಾಯರ ೮೦ ನೇ ಹುಟ್ಟು ಹಬ್ಬದ  ಅಭಿನಂದನಾ ಕಾರ್ಯಕ್ರಮ' ಕ್ಕೆ ಅರ್ಥಪೂರ್ಣ ಚಾಲನೆ ನೀಡಿದ್ದು ಇಡೀ ವರ್ಷದ ಕಾರ್ಯಕ್ರಮಗಳೂ ಹೀಗೇ ಸಾಗಿ ರಾಮಕೃಷ್ಣರಾವ್ ಅವರ 80ನೇ ಸಂವತ್ಸರ ನೆನಪಿನಲ್ಲುಳಿಯುವ ವರ್ಷವಾಗಲಿ, ಎಂಬ ಹಾರೈಕೆ ಕುಟುಂಬದ ಎಲ್ಲ ಸದಸ್ಯರದು. 

ಕಾರ್ಯಕ್ರಮದ ಶುಭಾರಂಭ ಶ್ರೀಮತಿ. ಲಲಿತಾ ರಾಮಕೃಷ್ಣರ ಕೀರ್ತನೆಯಿಂದ :

ನಿಗದಿಯಾದ ಕಾರ್ಯಕ್ರಮ ಸಂಜೆ ೫-೩೦ ಕ್ಕೆ. ಶ್ರೀಮತಿ.  ಲಲಿತಾ ರಾಮಕೃಷ್ಣ ರಾವ್ ರವರ ಧ್ವನಿಮುದ್ರಿತ ಗಾಯನವನ್ನು ಬಳಸಲಾಯಿತು.  ಸೌ. ಲಲಿತಾರವರು ತಮ್ಮ ಪತಿಯಾಗುವ ರಾಮಕೃಷ್ಣರನ್ನು  (ವರ) ಪ್ರಪ್ರಥಮವಾಗಿ  ಭೇಟಿ ಮಾಡಿದ ಸಮಯದಲ್ಲಿ ಹಾಡಿದ ಹಾಡು. (ಕಿಟಕಿಯ ಕತ್ತಲಿನ ಹಿನ್ನೆಲೆಯಲ್ಲಿ ಸರಿಯಾಗಿ ನೋಡಲೂ ಸಾಧ್ಯವಾಗದಿದ್ದು ಬೇರೆ ವಿಷಯ) ಜ್ಯೋತಿ ಬೆಳೆಗಿಸುವ ಸಂದರ್ಭದಲ್ಲಿ ಪ್ರಸ್ತುತಿ ಪಡಿಸಿದಾಗ ಇಡೀ ಸಭಾಂಗಣದಲ್ಲಿ ಹೊಸ ಅನುಭವ ಮೂಡಿಬಂತು. ಇದು ಶ್ರಿ. ಎಚ್. ಆರ್. ರಾಮಕೃಷ್ಣರಾವ್ ರವರ ಭಾಷಣದ ಮೇಲು ಅದ್ಭುತ ಪರಿಣಾಮವನ್ನು ಉಂಟು ಮಾಡಿತು. ಈ ಸಮಾರಂಭದ  ಅಧ್ಯಕ್ಷತೆಯನ್ನು ಭಾರತಿಯ ವಿದ್ಯಾಭವನದ ಡಾ. ಎಸ್. ಬಾಲಚಂದ್ರ ರಾವ್ ವಹಿಸಿದ್ದರು.

ಉಪಾಹಾರ ಸ್ವಲ್ಪ ತಡವಾಗಿ ಶುರುವಾಯಿತು (೧೦ ನಿಮಿಷ)

ಸಮಾರಂಭದಲ್ಲಿ  ಉಪಸ್ಥಿತರಿದ್ದ ಪ್ರಮುಖರು : 

ಸಾಹಿತಿ ಪಿ.ವಿ.ನಾರಾಯಣ, ವಿಜ್ಞಾನ ಸಂವಹನಕಾರ, ಎಮ್. ಆರ್. ನಾಗರಾಜ್.

ಮೊದಲು ಇ. ಬಸವರಾಜು ರವರ 'ಓ ನನ್ನ ಚೇತನ' ಎಂಬ ಆಶಯ ಗೀತೆಯನ್ನು ಹಾಡಿದ ಬಳಿಕ, ಡಾ ಕೋ.ವೆಂ. ರಾಮಕೃಷ್ಣೇಗೌಡರ ನವಿರಾದ ಧ್ವನಿ ಪೂರ್ಣ ನಿರೂಪಣೆಯಿಂದ ಮೊದಲುಗೊಂಡು ವಂದನಾರ್ಪಣೆಯವರೆಗೆ ಜರುಗಿದ ಕಾರ್ಯಕ್ರಮ ಸರಳ ರೀತಿಯದಾಗಿತ್ತು .

ಮನೆಯವರೇ ಆದ,  ಶ್ರಿಮತಿ. ರತ್ನಮ್ಮಾ ಕೃಷ್ಣಮೂರ್ತಿಯವರು ಶ್ರಿ. ಎಚ್. ಆರ್. ಆರ್ ರವರನ್ನು ಹರಸುತ್ತಿರುವುದು !



 
ಶ್ರಿ. ಎಚ್. ಆರ್. ರಾಮಕೃಷ್ಣ ರಾವ್ ರವರ ಅಣ್ಣ ಶ್ರೀ ಎಚ್. ಆರ್. ನಾಗರಾಜರಾಯರು ಮತ್ತು ಬಂಧುವರ್ಗದವರು, ಗೆಳೆಯರು, ಕುಳಿತಿರುವ ದೃಶ್ಯ. (ರಾಯರ ಎರಡನೆಯ ಮಗಳು. ಚಿ. ಸೌ. ಸ್ಮಿತಾ ವಿಶ್ವನಾಥ್,  ಮತ್ತು ಅಣ್ಣನ ಮೊಮ್ಮಗಳು ಕು. ಗಗನ ಕುಳಿತಿದ್ದಾರೆ. )


ಚಿ. ಶ್ರೀಧರ ನಾಗರಾಜ ರಾವ್,  (ಪ್ರೊ. ಎಚ್. ಆರ್. ಆರ್. ರಾವ್ ರವರ ಅಣ್ಣನ ಮಗ) ಮತ್ತು ಕುಮಾರಿ ಗಗನ ಶ್ರೀಧರ್ ಮತ್ತು ಆಹ್ವಾನಿತರು. 

                                      
                                      ಶ್ರೀ. ಶ್ರೀನಿಧಿ, ಸೌ. ಉಷಾ ಶ್ರೀಧರ್ ಹಾಗೂ ಆಹ್ವಾನಿತ ಸಭಿಕರು. 


                                        ಶ್ರೀ. ಡಿ. ಎಸ್. ಅಶ್ವತ್ಥ ನಾರಾಯಣ  ಮತ್ತಿತರ ಆಹ್ವಾನಿತ ಸಭಿಕರು. 


ಒಂದು ರೀತಿಯಲ್ಲಿ ಎಲ್ಲ ಸಭಿಕರನ್ನೂ ಮಂತ್ರಮುಗ್ಧರನ್ನಾಗಿಸುವ ರೀತಿಯಲ್ಲಿ ಮುಂದುವರೆಯಿತು.ಇಡೀ ವರ್ಷದ ಕಾರ್ಯಕ್ರಮಗಳನ್ನು ರೂಪಿಸುವ (ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದಂತೆ ಎಚ್.ಆರ್.ಆರ್. ಅಭಿನಂದನಾ ಗ್ರಂಥ, ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರ, ಜನವಿಜ್ಞಾನ ಚಳವಳಿ ಮುಂದುವರೆಸುವ ನಿಟ್ಟಿನಲ್ಲಿ ಹೆಜ್ಜೆಯಿಡುವ) ಪ್ರಸ್ತಾವನೆ ಮಾಡಲಾಯಿತು ಸಭಾಂಗಣದಲ್ಲಿ ಸುಮಾರು 70 ಜನರಿಗೆ ಸ್ಥಳಾವಕಾಶವಿದ್ದರೂ ನಿಂತಿದ್ದವರು, ಬಾಗಿಲಲ್ಲಿ ಇಣುಕಿನೋಡುತ್ತಿದ್ದವರೂ, ಕಾರಿಡಾರ್‍ನಲ್ಲಿ ಅಡ್ಡಾಡುತ್ತಿದ್ದವರೂ ಸೇರಿ ಶತಕದ ಗಡಿ ದಾಟಿದ್ದಿತು. ಬಂದವರ ಬಗ್ಗೆ ಹೇಳುವುದಾದರೆ, ರಾಘು  ಮನೆಯವರು, ನಾಗರಾಜರಾವ್ ಕುಟುಂಬದವರು, ಸ್ಮಿತಾ, ಅನಿಕೇತ್, ಸುಚರಿತಾ, ಪ್ರಣತಿ ಕುಟುಂಬದವರು. ಬೆಂಗಳೂರಿನ  ವಿವಿಧ ಕ್ಷೇತ್ರಗಳ ಗಣ್ಯರಾದ ಇ. ನಂಜಪ್ಪ, ವೆಂಕಟಸ್ವಾಮಿ, ಜೆ.ಎನ್.ಎನ್. ಮೂರ್ತಿ, ಜಿ. ರಾಮಕೃಷ್ಣ, ಆಕಾಶವಾಣಿಯ  ನಿವೃತ್ತ ಅಧಿಕಾರಿ ಎಚ್.ಆರ್. ಕೃಷ್ಣಮೂರ್ತಿ, ಸುಮಂಗಲ ಮಮ್ಮಿಗಡ್ಡಿ, ಶುಭಮಂಗಳ ಶ್ರೀನಾಥ್, ಶ್ರೀಮತಿ ಪ್ರಹ್ಲಾದಮೂರ್ತಿ, ಸಭಿಕರಲ್ಲಿ ಉಪಸ್ಥಿತರಿದ್ದವರು ಕೋಲಾರ ಪತ್ರಿಕೆಯ ಉಪಸಂಪಾದಕ ಎಚ್. ಕೆ. ರಾಘವೇಂದ್ರ ಔಪಚಾರಿಕವಾಗಿ ವರದಿ ಮಾಡಿಕೊಳ್ಳುತ್ತಿದ್ದವನು. ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ, ಕೆ.ವಿ. ರಾಜು, ಉದಯಭಾನು ಕಲಾಸಂಘದ ಕೃಷ್ಣ, ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಎಂದರೆ ಸುಮಾರು 20ರಿಂದ 25ರಷ್ಟು ಜನ ಭಾಗವಹಿಸಿದ್ದರು. 

ಶ್ರೋತೃಗಳ ಅನಿಸಿಕೆ :

ರಾಮಕೃಷ್ಣರಾವ್ ಅವರ ಜೀವನ, ಸಾಧನೆಯ ಕುರಿತು ಮತ್ತಷ್ಟು ವಿಸ್ತ್ರುತವಾಗಿ ಪರಿಚಯ ಮಾಡಿಕೊಡಬಹುದಿತ್ತು. ರಾಯರ  ಕುಟುಂಬದ ಸದಸ್ಯರ ಪರಿಚಯಕ್ಕೂ ಆಸ್ಪದವಾಗಿದ್ದರೆ, ಸ್ಥಳದಲ್ಲಿಯೇ ಸ್ವಾಗತ ಸಮಿತಿ ರಚಿಸಿ, ಅದಕ್ಕೆ ಕಾಲಬದ್ದ ಕಾರ್ಯಕ್ರಮಗಳನ್ನು ನಿಗದಿಪಡಿಸಿದ್ದರೆ ಇನ್ನೂ ಕಾರ್ಯಕ್ರಮಕ್ಕೆ ಹೊಸ ಮೆರುಗು ಬಂದು  ಸೊಗಸಾಗಿರುತ್ತಿದ್ದಿತು. ರಾಮಕೃಷ್ಣರಾವ್, ಪಿ.ವಿ. ನಾರಾಯಣ, ಎಂ.ಆರ್. ನಾಗರಾಜ್, ಬಾಲಚಂದ್ರರಾವ್ ಅವರ ಭಾಷಣ ತುಂಬಾ ಅರ್ಥವತ್ತಾಗಿತ್ತು.



ಸಭಿಕರ ಪ್ರಿತ್ಯಾದರಗಳ ಪ್ರತೀಕ : 


ಎಚ್. ಕೆ. ರಾಘವೇಂದ್ರನ ಪತ್ನಿ ಶ್ರೀಮತಿ. ವಿಜಯಲಕ್ಷ್ಮಿ, ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ  ಹಿರಿಯರಾದ  ಚಿಕ್ಕಪ್ಪನವರ ದರ್ಶನ ಮತ್ತು ಆಶೀರ್ವಾದ ಮಕ್ಕಳಿಗೆ, ಅದರಲ್ಲಿಯೂ ಮಗಳ ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯವೆಂಬ ಭಾವನೆ ಹೊಂದಿದ್ದು ಅದು ಸಾಕಾರಗೊಂಡಿತೆಂಬ ಸಂತಸದಲ್ಲಿದ್ದಾಳೆ. ಇವರ  ಪುತ್ರ ಶ್ರೀಹರ್ಷ, ಪುತ್ರಿ ಶ್ರೀಗೌರಿ, ನಾದಿನಿಯ ಮಗ ಶ್ರೀದತ್ತ ಮತ್ತು ಭಾವಮೈದುನ ನಾಗರಾಜ್ ಈ ಕಾರ್ಯಕ್ರಮದಲ್ಲಿ ಹಾಜರಾದವರು. ಎಚ್. ಕೆ. ರಾಘವೆಂದ್ರನ  ಮಗಳು ಶ್ರೀಗೌರಿಯಂತೂ ಶಾಲೆಯಲ್ಲಿ ತನ್ನ ಸಹಪಾಠಿಗಳಿಗೆ ಈ ಕಾರ್ಯಕ್ರಮದ ಕುರಿತು ಬಣ್ಣಿಸಿ  ತನ್ನ ಸಂತಸವನ್ನು ಹಂಚಿಕೊಂಡಲೆಂಬ ವಿಷಯ ಬಹಳ ಮುದಕೊಟ್ಟ ಸಂಗತಿ.  ಈ ಕಾರ್ಯಕ್ರಮಕ್ಕೆಂದೇ  ದೂರದ ಕೋಲಾರದಿಂದ ಮಧ್ಯಾಹ್ನ 2-40 ಕ್ಕೆ ಹೊರಟು ಕರಾರಸಾನಿ ಬಸ್ ಮೂಲಕ ಬೆಂಗಳೂರು ತಲುಪಿ, ನಗರ ಸಾರಿಗೆ ಮೂಲಕ ಬಸವನಗುಡಿ ಪೊಲೀಸ್ ಠಾಣೆ ಬಳಿ ಇಳಿದು, ಕಾರ್ಯಕ್ರಮದ ನಿಗದಿತ ತಾಣ ತಲುಪಿದ ಅವರ ಪ್ರಿತ್ಯಾದರಗಳು ಮೆಚ್ಚುವಂತಹವು. 

ಮರೆತ ಮಾತು :

ಮೇಲಿನ ವರದಿಯನ್ನು ಆಪ್ತ ಅಣ್ಣನಮಗ, ಎಚ್. ಕೆ. ರಾಘವೇಂದ್ರ, ಗೆಳೆಯ ನವೀನ್ ರ ನೆರವಿನಿಂದ ಮಾಡಿದ್ದಾನೆ. ಇದರಲ್ಲಿ ಇರಬಹುದಾದ ತಪ್ಪುಗಳನ್ನು ಮತ್ತು ವರದಿಯ ಬಗ್ಗೆ ತಿದ್ದುಪಡಿಯನ್ನು ಮಾಡಲು ಯಾರಾದರೂ ಇಚ್ಛಿಸಿದಲ್ಲಿ, ನನಗೆ ತಿಳಿಸಿ. ಇನ್ನೂ ಹೆಚ್ಚು ಚಿತ್ರಗಳನ್ನು ಯಾರಾದರೂ ತೆಗೆದುಕೊಂಡಿದ್ದರೆ ಅವನ್ನು ಕಳಿಸಿದರೆ, ಸೇರ್ಪಡಿಸುತ್ತೇನೆ.

ಧನ್ಯವಾದಗಳು. 

-ಎಚ್. ಆರ್. ಲಕ್ಷ್ಮೀ ವೆಂಕಟೇಶ 

ನನ್ನ ಇ-ಮೇಲ್ ವಿಳಾಸ : hrl.venkatesh@gmail.com

ಕಾರ್ಯಕ್ರಮದ ಮಾಹಿತಿ ಮತ್ತು ವರದಿ :

-ಹೊಳಲ್ಕೆರೆ ಕೃಷ್ಣಮೂರ್ತಿ ರಾಘವೇಂದ್ರ ರಾವ್

-ಎಸ್. ಕೆ. ನವೀನ್ (ಚಿತ್ರಗಳು)

-ಹೊರಂಲವೆಂ (ಸಂಪಾದನೆ)

-ಸ್ಮಿತಾ ವಿಶ್ವನಾಥ್ (ಚಿತ್ರಗಳು)

- ಹೊಳಲ್ಕೆರೆ ನಾಗರಾಜರಾವ್ ಶ್ರೀಧರ್ (ಚಿತ್ರಗಳು)






Comments

ಹೀಗೊಂದು ನೆನಪು. (ನಾನಿದ್ದಿದ್ದು, ದೂರದ ಮುಂಬಯಿನಲ್ಲಿ) ; ಆದರೆ ಒಳಮನಸ್ಸು ಕೇಳಬೇಕೇ ?
Venkatesha

Popular posts from this blog

ತಾಯಿಯಂತೆ ಮಗಳು ನೂಲಿನಂತೆ ಸೀರೆ !

Shri. Chitradurga Mahadev Bhatt, Bombay's one of the Great Yoga teachers during 1950s to 1980s !

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !