Posts

Showing posts from October, 2014

ಆರತಿ ಬೆಳಗಿರೆ ನಾರಿಮಣಿಯರು, ನಮ್ಮ ಮುದ್ದು ರಂಗಗೆ, ....ಮುದ್ದು ಅನೀಶಗೆ !

Image
ದೊಡ್ಡಮ್ಮನ  ಆಶಿರ್ವಾದ  ನಿನಗಿರಲಿ ಎಲೆ ಕಂದ ! ಮೊದಲ ದೀಪಾವಳಿಯ ಸಂಭ್ರಮವಿದೆ, ನೀನೀಗ ನಮ್ಮ ಮನೆಯ ದೀಪ, ಅಳುವನಿಲ್ಲಿಸಿ ನಗು ನಗುತ ಮಲಗು ಮಗುವೆ ! ಈ ಕೃಷ್ಣನ ಜೋಗುಳದ ಹಾಡು ಎಷ್ಟು ಚೆನ್ನಾಗಿದೆಯಲ್ಲವೇ ! Link : http://www.youtube.com/watch?v=GQdkjg4zgqU#t=16 ಜಯ ಜನಾರ್ಧನ ಕೃಷ್ಣ ರಾಧಿಕಾಪತೇ ಜನ ವಿಮೋಚನ ಕೃಷ್ಣ ಜನ್ಮ ಮೋಚನ ಗರುಡ ವಾಹನ ಕೃಷ್ಣ ಗೋಪಿಕಾ ಪತೇ ನಯನ ಮೋಹನ ಕೃಷ್ಣ ನೀರಜೇಕ್ಷಣ ಸುಜನ ಬಾಂಧವ ಕೃಷ್ಣ ಸುಂದರ ಕೃತೆ ಮದನ ಕೋಮಲ ಕೃಷ್ಣ ಮಾಧವ ಹರೇ ವಸುಮತಿ ಪತೇ ಕೃಷ್ಣ ವಾಸವಾನುಜ ವರಗುಣಾಕರ ಕೃಷ್ಣ ವೈಷ್ಣವಾಕೃತೆ ಸುರಚಿರಾನನ ಕೃಷ್ಣ ಶೌರ್ಯವಾರಿಧೆ ಮುರಹರ ವಿಭೋ ಕೃಷ್ಣ ಮುಕ್ತಿದಾಯಕ ವಿಮಲಪಾಲಕ ಕೃಷ್ಣ ವಲ್ಲಭಿಪತೆ ಕಮಲಲೋಚನಾ ಕೃಷ್ಣ ಕಾಮ್ಯದಾಯಕ ವಿಮಾಲಗಾತ್ರನೇ ಕೃಷ್ಣ ಭಕ್ತವತ್ಸಲ ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಮ್ ಕುವಲೈಕ್ಷಣ ಕೃಷ್ಣ ಕೋಮಲಾಕೃತೆ ತವ ಪದಾಮ್ಬುಜಂ ಕೃಷ್ಣ ಶರಣಾಮಾಶ್ರಯೆ ಭುವನ ನಾಯಕ ಕೃಷ್ಣ ಪಾವನಾಕೃತೆ ಗುಣಗಣೋಜ್ವಲಾ ಕೃಷ್ಣ ನಳಿನಲೋಚನ ಪ್ರಣಯವಾರಿಧೆ ಕೃಷ್ಣ ಗುಣಗಣಾಕರ ದಾಮಸೋದರ ಕೃಷ್ಣ ದೀನ ವತ್ಸಲ ಕಾಮಸುಂದರ ಕೃಷ್ಣ ಪಾಹಿ ಸರ್ವಾದಾ ನರಕನಾಶನ ಕೃಷ್ಣ ನರಸಹಾಯಕ ದೇವಕಿಸುತ ಕೃಷ್ಣ ಕಾರುಣ್ಯಾಂಭುದೇ ಕಂಸಾನಾಶನ ಕೃಷ್ಣ ದ್ವಾರಕಾಸ್ಥಿತ ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ ತ್ವತ್ ಪದಾಮ್ಬುಜಂ ಕೃಷ್ಣ ಶ್ಯಾಮ ಕೋಮಲಮ್ ಭಕ್ತವತ್ಸಲ ಕೃ...

ಪುಟಾಣಿ ಅನೀಶ್ ಗೆ ಅಜ್ಜನ ಆಶೀರ್ವಾದದ ಜೊತೆಗೆ, ಅಜ್ಜಿಯ ಶುಭಾಶೀರ್ವಾದಗಳು ಸಹಿತ !

Image
ಬಹುದಿನದ ಹರಕೆಯ ನಂತರ ಮತ್ತೆ ಮನೆಯಲ್ಲಿ ಸಂತಸದ ಹೊನಲು ಹರಿಯುತ್ತಿದೆ !                                                              ನಮ್ಮೆಲ್ಲರ ಶುಭ ಕಾಮನೆಗಳು ! ಅಳುವ ಕಂದನ ತುಟಿಯು ಹವಳದ ಕುಡಿಹಂಗ ಕುಡಿ ಹುಬ್ಬು ಬೆವಿನೆಸಳಂಗ/ಕಣ್ಣೋಟ ಶಿವನ ಕೈಯಲಗು ಹೊಳೆದಂಗ ಕೂಸೆಲ್ಲ ಕುಂದಣ ನೆತ್ತೆಲ್ಲ ಜಾವೂಳ ಕಟ್ಟಿ ಕೆಳಗಾಡಿ ಬೆವತಾನ/ನನ ಬಾಲ ಹೊಸ ಮುತ್ತಿನ ದೃಷ್ಟಿ ತಗದೇನ ರಚ್ಚೆ ಏತಕೊ ನಿನದು ಬೆಚ್ಚನೆ ಹಾಲ ಕುಡಿದು ಮಲಗೋ ನೀನು ನನ ಕಂದ ಮಲಗೋ ನೀನು ನನ ಕಂದ... ಅಳುವ ನಿಲಿಸಿ ನೀನು ಬಳಸಿ ನಡುವ, ಜೇನು ನಿದ್ದೆಗೆ ಜಾರೋ ನನ ಕಂದ ನಿದ್ದೆಗೆ ಜಾರೋ ನನ ಕಂದ... ಮೆಲ್ಲನೆ ಬೆನ್ನನು ತಟ್ಟಿ ಗಲ್ಲಕೆ ಮುದ್ದನು ಇಟ್ಟು ಜೋಗುಳ ಹಾಡುವೆ ನನ ಕಂದ ಜೋಗುಳ ಹಾಡುವೆ ನನ ಕಂದ... ಓಡೋಡಿ ಬಳಿ ಬಂದು ಉಡಿಯ ನುಸುಳಿ ಇಂದು ಹಾಯಾಗಿ ಮಲಗೋ ನನ ಕಂದ ಹಾಯಾಗಿ ಮಲಗೋ ನನ ಕಂದ... ರಂಪಾಟ ಸಾಕಿನ್ನು ಜೊಂಪಾಟವ ಆಡಿನ್ನು ಸೊಂಪಾಗಿ ಮಲಗೋ ನನ ಕಂದ ಸೊಂಪಾಗಿ ಮಲಗೋ ನನ ಕಂದ... ಹಾಯಾಗಿ ಮಲಗೋ ನನ ಕಂದ... ನಿದ್ದೆಗೆ ಜಾರೋ ನನ ಕಂದ... ಬೆಚ್ಚನೆ ಮಲಗೋ ನನ ಕಂದ... ಹಚ್ಚಗೆ ಮಲಗೋ ನನ ಕಂದ... ಇದರಲ್ಲಿ ಯಾವ ಪದ್ಯವನ...