ಹೊಳಲಿನ ತರಹ ಮೂರೂಕಡೆ ಕೆರೆಗಳಿದ್ದರೂ ಸಹಿತ, ಕುಡಿಯುವ ನೀರಿಗೆ ಯಾವಾಗಲೂ ಬರ !
ನಾನು ನಮ್ಮ ಮಹಾರಾಷ್ಟ್ರದ ಬೊಂಬಾಯಿನಲ್ಲಿದ್ದಾಗ, ನಮ್ಮ ಊರು ಹೊಳಲ್ಕೆರೆಯ ಮಾತು ಬಂದಾಗಲೆಲ್ಲಾ ಗೆಳೆಯರಮುಂದೆ ಹೆಮ್ಮೆಯಿಂದ ಹೊಳಲಿನ ತರಹ ಎಲ್ಲಾ ಕಡೆಯೂ ನೀರಿದ್ದ ನಿವೇಶನ, ನಮ್ಮೂರು ಹೊಳಲ್ಕೆರೆ-ಎಂದಾಗ ಅವರೆಲ್ಲಾ ತಮ್ಮ ಕಣ್ಣರಳಿಸಿ, " ಅಯ್ಯಾ ಎವಡಿ ಛಾನ್ ಆಹೆನಾ, "ಎಂದು ಉದ್ಗರಿಸಿದಾಗ ಏಕೋ ಸಮಾಧಾನವೆನಿಸಲಿಲ್ಲ. ಏಕೆಂದರೆ ಬಹಳ ವರ್ಷಗಳನಂತರ ನಾವು ಅನುಭವಿಸಿದ ನೀರಿನ ಬವಣೆ ಏಕೋ ಮನಸ್ಸಿನಿಂದ ಜಾರಿ, ಕೇವಲ ಮಾತೃ ಭೂಮಿಯ ಪ್ರೀತಿ ಆಜಾಗವನ್ನು ಆಕ್ರಮಿಸಿತ್ತು !
Comments