Posts

Shri. Venugopala swamy temple, Holalkere !

Image
ಹೊಳಲ್ಕೆರೆ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವನ್ನು ಪುನರ್ಜಿವಿತಗೊಳಿಸಿದ್ದಾರೆ. ಶ್ರೀ ನಟರಾಜ್ ಮತ್ತು ಗೆಳೆಯರಿಂದ ದೇವಸ್ಥಾನಕ್ಕೆ ಗೋಪುರದ ನಿರ್ಮಾಣವಾಗಿದೆ. ಈಗ ವೇಣುಗೋಪಾಲ ಸ್ವಾಮಿಗೆ ಬೆಳ್ಳಿಯ ಕವಚವನ್ನೂ ಮಾಡಿಸಿದ್ದಾರೆ. ರಥೋತ್ಸವದ ಸಮಯದಲ್ಲಿ ಮತ್ತು ವಿಶೇಷ ಪೂಜಾ ಸಮಯದಲ್ಲಿ ಇದನ್ನು ತೊಡಿಸಿ ಸ್ವಾಮಿಗೆ ಅಲಂಕಾರ ಮಾಡಿಸುತ್ತಾರೆ.    https://photos.app.goo.gl/VAkNa1nas57Axt3D6

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !

Image
ನನ್ನ ಜೀವನದಲ್ಲಿ ಗಾಢವಾದ ಪ್ರಭಾವ ಬೀರಿದ ಕೃತಿಗಳಲ್ಲಿ ಶ್ರೀಯುತ ಎಸ್. ಎಲ್. ಭೈರಪ್ಪನವರ 'ಭಿತ್ತಿ' ಮತ್ತು 'ವಂಶವೃಕ್ಷ' .  ನನ್ನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಇವುಗಳಲ್ಲಿ ಉತ್ತರ ಸಿಕ್ಕಿದೆ. ಹಾಗೆಯೇ ಇವರ ಇತರ ಕೃತಿಗಳನ್ನೂ ಬಹಳ ಆಸಕ್ತಿಯಿಂದ ಓದಿದ್ದೇನೆ. ಓದಿ ಹಲವರಿಗೆ ಕೇಳಿಸಿದ್ದೇನೆ. ಇಂತಹಾ ಮೇರು ವ್ಯಕ್ತಿತ್ವದ ಹಿರಿಯರನ್ನು ಕಾಣಬೇಕು, ಮಾತನಾಡಬೇಕು ಎಂಬ ಆಸೆ ಬಹಳ ದಿನಗಳಿಂದ ಇತ್ತು. ಹಿಂದೊಮ್ಮೆ ಕಂಡಿದ್ದರೂ ಸಮಾರಂಭದಲ್ಲಿ. ಅದೂ ದೂರದಿಂದ. ಮಾತನಾಡಿದ್ದರೂ ಅದು ದೂರವಾಣಿಯಲ್ಲಿ. ನೇರವಾಗಿ ಅಲ್ಲ. ಈಗ ಈ ಸುಸಂದರ್ಭ ಸಿಕ್ಕಿತು. ಸೋದರ ಮಂಜುನಾಥ್, ನನ್ನನ್ನು ಅವರ ಮನೆಗೆ ಕರೆದೊಯ್ದು ಪರಿಚಯಿಸಿದರು.  ನನಗೆ ನಿಜವಾಗಿಯೂ ಏನೂ ಮಾತನಾಡಲು ಮೊದಲಿಗೆ ತೋಚಲಿಲ್ಲ. ಬಹಳ ಪ್ರೀತಿಯಿಂದ ಕೂಡಿಸಿ ಮಾತನಾಡಿಸಿದರು. ಈಗಿನ ಮಕ್ಕಳ ಶಿಕ್ಷಣದಲ್ಲಿ ಮೌಲ್ಯ, ನೀತಿ ಕಾಣೆಯಾಗುತ್ತಿರುವುದರ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು. ಬಳಸುವ ಭಾಷೆಯ ಬಗ್ಗೆ, ತಮ್ಮ ಕಾದಂಬರಿಗಳ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು. ಫೋಟೋ ತೆಗೆಯಲು ಅನುಮತಿ ನೀಡಿದರು. ಆರೋಗ್ಯ ಸರಿಯಿಲ್ಲದೆ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದರು. ನಾನು ಅವರ ಕಾದಂಬರಿಗಳನ್ನು ಓದಿ ರೆಕಾರ್ಡ್ ಮಾಡಿ ಆಸಕ್ತರಿಗೆ ಕೇಳಿಸುತ್ತಿರುವುದರ ಬಗ್ಗೆ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದರು. ಕಳಿಸಿಕೊಡಲು ಬಾಗಿಲವರೆಗೂ ಬಂದರು. ನಿಜಕ್ಕೂ ಇದೊಂದು ಮಧುರ ಕ್ಷಣ. "ಗೋವಿನ ಕಥೆ"

ಮೈಸೂರು ಆಕಾಶವಾಣಿ ನಿಲಯದಲ್ಲಿ ಮೈಸೂರು ಹಬ್ಬದಾಚರಣೆ !

Image
ಇದೇ ಮೊದಲು ಸಾರ್ವಜನಿಕರನ್ನು ಆಕಾಶವಾಣಿ ನಿಲಯದ ಒಳಗೆ ಬಿಡುತ್ತಿರುವುದು ; ಮೈಸೂರು ನಾಗರೀಕರು ಅತ್ಯಂತ ಸಂಭ್ರಮದಿಂದ ತಮ್ಮ ಪ್ರೀತಿಯ ಮೈಸೂರು ಆಕಾಶವಾಣಿ ನಿಲಯದ ಒಳ ಭಾಗದ ಕಾರ್ಯ ಚಟುವಟಿಕೆಗಳನ್ನು ಹತ್ತಿರದಲ್ಲಿ ನೋಡಲು ಕಾತುರರಾಗಿದ್ದಾರೆ.  ಆಕಾಶವಾಣಿಯ ಕಾರ್ಯಕ್ರಮ ನಿರೂಪಕ,  ಶ್ರೀ.  ಪ್ರಭು ಸ್ವಾಮಿ ಮಳಿ ಮಟ್,  ಜೊತೆಯಲ್ಲಿ ಶ್ರೀಮತಿ. ಸುಮಾ ವಿಜಯಶಂಕರ್                                ಶ್ರೀಮತಿ ಸಾವಿತ್ರಿ ರಂಗನಾಥ್,  ಶ್ರೀ.  ಬೇದ್ರೆ ಮಂಜುನಾಥ್ ರವರ ಜೊತೆಯಲ್ಲಿ                                                 ಶಾಲಾ ಬಾಲಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.   ನಮ್ಮ ಭಾರತದ ಪ್ರೀತಿಯ ಪ್ರಧಾನಿ,  ಶ್ರೀ. ನರೇಂದ್ರ ಭಾಯಿ ಮೋದಿಯವರು "ಅಪ್ನೀ  ಮನ್ಕಿ ಬಾತ್"  ಕಾರ್ಯಕ್ರದಲ್ಲಿ ಆಕಾಶವಾಣಿ ಮೈಸೂರಿನ ಸಾಧನೆಗಳನ್ನು ಕುರಿತು ಗುಣಗಾನ ಮಾಡಿದರು.  ಮೈಸೂರು ಆಕಾಶವಾಣಿ ನಿಲಯದ ಮೈಸೂರು ಹಬ್ಬವನ್ನು ವೀಕ್ಷಿಸಿದ ಮೈಸೂರಿನ ನಾಗರಿಕರ ಅನಿಸಿಕೆಗಳು   :  -ಸುಮಾ ವಿಜಯಶಂಕರ್, ಎಂ. ಎಸ್ಸಿ.; ಬಿ. ಎಡ್   ಉಪನ್ಯಾಸಕರು , ಮ್ಯಾಥೆಮ್ಯಾಟಿಕ್ಸ್  ದಿನಾಂಕ ೧೮, ನವೆಂಬರ್, ೨೦೨೨ ರಂದು ಆಕಾಶವಾಣಿ ಮೈಸೂರು ಕೇಂದ್ರವು ತನ್ನ ನುಡಿಸೇವೆಯಲ್ಲಿ ೮೭ ವರ್ಷಗಳನ್ನು ಪೂರೈಸಿ, ೮೮ ನೇ ವರ್ಷಕ್ಕೆ ಮುನ್ನಡೆತಿದ್ದು ' ಕನ್ನಡ ಹಬ್ಬ' ವನ್ನು ಆಯೋಜಿಸಿತ್ತು. ಅದಕ್ಕೆ ನಾನೂ ಸಹಿತ ಹೋಗಿದ್ದೆ, ಎಂಬುದು ಸಂತಸದ ವಿಷಯ.  ಹೋ

’ಪ್ರಭಾತ್ ಪೇರಿ ಮೆರವಣಿಗೆ ~

ಬಾಲ್ಯದ ದಿನಗಳಲ್ಲಿ ನಾವು ವೀಕ್ಷಿಸಿದ ಪ್ರಭಾತ್ಪೇರಿ ಮೆರವಣಿಗೆ  ನಮಗೆ ಮುದಕೊಟ್ಟ ಸಂದರ್ಭ  ! ೧೯೪೪ ರಲ್ಲಿ, ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ನಾನು ಮತ್ತು ನನ್ನ ತಮ್ಮ ಚಂದ್ರ, ’ಪ್ರಭಾತ್ ಪೇರಿ ಮೆರವಣಿಗೆ ’ಯನ್ನು ಅತಿ ಹತ್ತಿರದಿಂದ ನೋಡಿದ ಪುಣ್ಯವಂತರು. ಆಗ ಎಲ್ಲರಲ್ಲೂ ದೇಶಭಕ್ತಿ, ದೇಶದ ಬಗ್ಗೆ ಅಪಾರಪ್ರೇಮ ಜಾಗೃತವಾಗಿದ್ದ ಕಾಲವದು. ಜನರೆಲ್ಲಾ ಸಾಧ್ಯವಾದಷ್ಟು ಉತ್ತಮವಾದ ನ್ಯಾಯಯುತವಾದ ಕೆಲಸಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬರುವ ಆದಾಯದಲ್ಲೇ ಹೆಚ್ಚು ಆಸೆಪಡದೆ ಜೀವನ ನಿರ್ವಹಣೆ ಮಾಡುತ್ತಿದ್ದ ಕಾಲ. ಅವರೆಲ್ಲಾ ಅಲ್ಪತೃಪ್ತರು. ತಮಗೆ ಬೇಕಾದಷ್ಟನ್ನು ಮಾತ್ರ ಉಪಯೋಗಿಸಿ ಯಾವ ವಸ್ತುವನ್ನೂ ಮನೆಯಲ್ಲಿ ಅತಿಯಾಗಿ ಶೇಖರಿಸದೆ ಸ್ವಚ್ಛ-ಜೀವನಾಪೇಕ್ಷಿಗಳಾಗಿದ್ದರು. ನನಗೆ ಜ್ಞಾಪಕವಿದ್ದಂತೆ, ನನ್ನ ಬಾಲ್ಯದ ದಿನಗಳಲ್ಲೂ ಸ್ವಾತಂತ್ರ್ಯದಿನದಂದು, ಮತ್ತು ಗಣರಾಜ್ಯದಿನದಂದು,  ’ಮಹಾತ್ಮಾ ಗಾಂಧೀಕಿ ಜೈ’, ’ಭಾರತ್ ಮಾತಾಕಿ ಜೈ’ ಎನ್ನುವ ಕೂಗಿನಿಂದ ರಸ್ತೆಗಳಲ್ಲಿ ಬೆಳಗಿನ ವೇಳೆಯಲ್ಲಿ ಬರುವ ’ಪ್ರಭಾತ್ಪೇರಿ’  ಮೆರವಣಿಗೆಯನ್ನು ನಾವು ಕಾತುರದಿಂದ ವೀಕ್ಷಿಸಲು ಸಿದ್ದರಾಗುತ್ತಿದ್ದೆವು.  ಚಿಕ್ಕ ಪಲ್ಲಕ್ಕಿಯಲ್ಲಿ, ರಾಷ್ಟ್ರನಾಯಕರಾಗಿದ್ದ, ಬಾಲಗಂಗಾಧರ್ ತಿಲಕ್, ಗೋಪಾಲಕೃಷ್ಣ ಗೋಖಲೆ,  ಬಾಬು ರಾಜೇಂದ್ರ ಪ್ರಸಾದ್, ಮತ್ತು ಜವಹರ್ ಲಾಲ್  ನೆಹರೂ ರವರ ಚಿತ್ರಪಟಗಳನ್ನಿಟ್ಟು ಅವಕ್ಕೆ ಹಾರಹಾಕುತ್ತಿದ್ದರು. ’ಹೊರಘೋಗಿ ನೋಡೋ ’ಪ್ರಭಾತ್ಪೇರಿ’ ಬಂತೇ

Shri. Chitradurga Mahadev Bhatt, Bombay's one of the Great Yoga teachers during 1950s to 1980s !

Image
Shri. Chitradurga Mahadev Bhatt. Bombay's one of the Great Yoga teachers during 1950s to 1980s ! ಪ್ರಸಿದ್ಧ ಯೋಗಾಚಾರ್ಯ, ಹಾಗೂ ಸಂಸ್ಕೃತ  ಪಂಡಿತರಾಗಿದ್ದ  ಚಿತ್ರದುರ್ಗ ಮಹಾದೇವ ಭಟ್  , 'ಸಿ. ಎಂ. ಭಟ್,' ಎಂದೇ  ತಮ್ಮ ಗೆಳೆಯರಿಗೆ ಹಾಗೂ  ಸಹೋದ್ಯೋಗಿಗಳಿಗೆ ಚಿರ ಪರಿಚಿತರಾಗಿದ್ದರು.   ಚಿತ್ರದುರ್ಗ  ಮಹದೇವ್ ಭಟ್ಟರು, ಗುಂಡಾ ಭಟ್ಟರ ೬ ಜನ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. ಗಂಡು ಮಕ್ಕಳು : ೧. ಪುರುಷೋತ್ತಮ್  ಜೋಯಿಸ್, ೨. ಮಹಾದೇವ್ ಜೋಯಿಸ್, ೩. ಶ್ರೀನಿವಾಸ್ ಜೋಯಿಸ್,  ಹೆಣ್ಣು ಮಕ್ಕಳು : ೧. ಶಾರದಮ್ಮ, ೨. ಮೀನಾಕ್ಷಮ್ಮ ೩. ರತ್ನಮ್ಮ.   ಗುಂಡಾ ಭಟ್ಟರು ಚಿತ್ರದುರ್ಗ ಮತ್ತು ಹತ್ತಿರದ ಗ್ರಾಮಗಳಲ್ಲಿ ಪೌರೋಹಿತ್ಯವನ್ನು ತಮ್ಮ ವೃತ್ತಿಯಾಗಿ ಪಾಲಿಸುತ್ತಿದ್ದರು. ಅವರು ಸಂಸ್ಕೃತ ಹಾಗೂ ಜ್ಯೋತಿಷ ಶಾಸ್ತ್ರದಲ್ಲಿ ಪ್ರಕಾಂಡ ಪಂಡಿತರು.  ಮಹಾದೇವ ಜೋಯಿಸ್ ರವರಿಗೆ  ಮಹದೇವ್ ಭಟ್ಟರೆಂದು ಹೆಸರು ಬರಲು ಕಾರಣ;    ಇದಕ್ಕೆ ಒಂದು ಚಿಕ್ಕ ಕತೆಯಿದೆ. ಮಹಾದೇವ ಜೋಯಿಸ್ ತಮ್ಮ ೧೨ ನೆಯ ವಯಸ್ಸಿನಲ್ಲೇ ಸಂಸ್ಕೃತ ಕಲಿಯಲು ಮೈಸೂರಿನ ಸಂಸ್ಕೃತ ಪಾಠಶಾಲೆಗೆ ಸೇರಿಕೊಂಡರು. ಅಲ್ಲಿ ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದ ತರುವಾಯ ಮೈಸೂರಿನ ರಾಜಮನೆತನದ ಸಂಸ್ಕೃತ ವಿದ್ಯಾಶಾಲೆಗಳಲ್ಲಿ ಶಿಕ್ಷಕರಾಗಿ ಸೇರಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಸಮಯದಲ್ಲಿ ಕೃಷ್ಣಮಾಚಾರ್ಯರೆಂಬ ಯೋಗ ಗುರುಗಳು ಉತ್ತರಭಾರತದಿಂದ ಮ

ತಾಯಿಯಂತೆ ಮಗಳು ನೂಲಿನಂತೆ ಸೀರೆ !

Image
ತಾಯಿಯಂತೆ ಮಗಳು ನೂಲಿನಂತೆ ಸೀರೆ ! ಇದು ಯುಗಯುಗಗಳಿಂದ ರೂಢಿಯಲ್ಲಿರುವ ಮಾತು. ಈಗ ನಮ್ಮ ಮುದ್ದು ಗೌರಿ ಅದನ್ನು ಸಾಬೀತು ಪಡಿಸುವಲ್ಲಿ ತೊಡಗಿರುವಂತೆ ಭಾಸವಾಗುತ್ತಿದೆ. ಅದೇನೋ ಅತ್ತೆ-ಸೊಸೆ ಎಂದಿಗೂ ತಾಯಿ ಮಗಳಾಗಲು ಸಾಧ್ಯವಿಲ್ಲವೇನೋ, ಎನ್ನುವಂತೆ ವರ್ತಿಸುತ್ತಾರೆ. ಆದರೆ ತಾಯಿ ಮಗಳು ಮಾತ್ರ ಅದೇನು ಅನ್ಯೋನ್ಯತೆ, ಹೊಂದಾಣಿಕೆ, ತನ್ನ ಮಗಳು ಏನೇ ತಪ್ಪು ಮಾಡಿದರು ಅದನ್ನು ಸೀರೆಗೆ ಒರೆಸಿಕೊಂಡು ಅವಳ ಪರವಹಿಸುವ ತಾಯಿ, ಹಾಗೆಯೇ ಅಮ್ಮನನ್ನು ಒಪ್ಪಕ್ಕಿಟ್ಟುಕೊಂಡು ಮಾತಾಡುವ ಮಗಳು ವಿಶ್ವದಾದ್ಯಂತ ಸಿಕ್ಕುತ್ತಾರೆ. ಆದರೆ ತಂದೆ ಮಗನ ಮಾತೇ ಬೇರೆ. ಮತ್ತೆ ತಂದೆ ಮಗಳ ಅನ್ಯೋನ್ಯತೆ ಸರ್ವಮಾನ್ಯ. ಇನ್ನು ಮಗಳೋ ತಾಯಿಮನೆ ಗಂಡನಮನೆಯನ್ನು ಬೆಸೆಯುವ ಒಂದು ಭದ್ರವಾದ ಕೊಂಡಿ ! ಅವಳಿರುವ ಜಾಗದಲ್ಲಿ ವೈಮನಸ್ಯತೆ ಇಲ್ಲ. ಪ್ರೀತಿ, ಸೌಹಾರ್ದ, ಹೊಂದಾಣಿಕೆಗಳು ವಿಪುಲವಾಗಿ ಕಾಣಿಸಿಕೊಂಡು ನೆಮ್ಮದಿ ವಿಶ್ವಾಸಗಳ ತಾಣವಾಗಿ ಮೆರೆಯುತ್ತವೆ. ಇದು ಸರ್ವೇ ಸಾಮಾನ್ಯವಾದ ಮಾತು ! ಇದು ನಮ್ಮ ಮುದ್ದು ಗೌರಿ ಮತ್ತು ಅವರ ಪ್ರೀತಿಯ ಅಮ್ಮ ಹರ್ಷರ ಜೊತೆಗೂಡಿ ತೆಗೆದ ಫೋಟೋ ! (ನಾವು ನೋಡಿದ ಮೊದಲ ಫೋಟೋ) ಇದೇ ತರಹದ ಫೋಟೋ ಅಪ್ಪನ ಜೊತೆಯಲ್ಲಿ, ಗೆಳತಿಯರ ಜೊತೆಯಲ್ಲಿ, ಅಂಕಲ್ ಆಂಟಿ  ಜೊತೆಯಲ್ಲಿ ಇದ್ದರೆ, ಕಳಿಸು. ಇಲ್ಲಿ ಹಾಕುತ್ತೇನೆ 

Shivappanayaka's palace is the great repository of valuable artefacts !

Image
Shivappanayaka's palace is the great repository of valuable artefacts ! The 17th century king, Shivappa Nayaka of the Keladi Nayaka dynasty, is located in Shivamogga city (formerly known as Shimoga), the district headquarters of the Shivamogga district in the Karnataka state, India. The two storied building comprises a Durbar hall ("nobel court") with massive wooden pillars and lobed arched panels. The living chambers on the sides are at the upper level and have balconies and look down into the hall. Numerous antiquities collected from near by temples and archaeological sites, such as sculptures, inscriptions and hero stones from the Hoysala era and later periods are on display at the palace grounds. The building is a protected monument under the  The Government Museum (Shivappa Nayaka's Palace) is under the  Karnataka state Government and it is a division of the Archaeological Survey of India. As  per one British art historian George Michell, the Shivappanayaka