Posts

Showing posts from 2022

ಮೈಸೂರು ಆಕಾಶವಾಣಿ ನಿಲಯದಲ್ಲಿ ಮೈಸೂರು ಹಬ್ಬದಾಚರಣೆ !

Image
ಇದೇ ಮೊದಲು ಸಾರ್ವಜನಿಕರನ್ನು ಆಕಾಶವಾಣಿ ನಿಲಯದ ಒಳಗೆ ಬಿಡುತ್ತಿರುವುದು ; ಮೈಸೂರು ನಾಗರೀಕರು ಅತ್ಯಂತ ಸಂಭ್ರಮದಿಂದ ತಮ್ಮ ಪ್ರೀತಿಯ ಮೈಸೂರು ಆಕಾಶವಾಣಿ ನಿಲಯದ ಒಳ ಭಾಗದ ಕಾರ್ಯ ಚಟುವಟಿಕೆಗಳನ್ನು ಹತ್ತಿರದಲ್ಲಿ ನೋಡಲು ಕಾತುರರಾಗಿದ್ದಾರೆ.  ಆಕಾಶವಾಣಿಯ ಕಾರ್ಯಕ್ರಮ ನಿರೂಪಕ,  ಶ್ರೀ.  ಪ್ರಭು ಸ್ವಾಮಿ ಮಳಿ ಮಟ್,  ಜೊತೆಯಲ್ಲಿ ಶ್ರೀಮತಿ. ಸುಮಾ ವಿಜಯಶಂಕರ್                                ಶ್ರೀಮತಿ ಸಾವಿತ್ರಿ ರಂಗನಾಥ್,  ಶ್ರೀ.  ಬೇದ್ರೆ ಮಂಜುನಾಥ್ ರವರ ಜೊತೆಯಲ್ಲಿ                                                 ಶಾಲಾ ಬಾಲಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.   ನಮ್ಮ ಭಾರತದ ಪ್ರೀತಿಯ ಪ್ರಧಾನಿ,  ಶ್ರೀ. ನರೇಂದ್ರ ಭಾಯಿ ಮೋದಿಯವರು "ಅಪ್ನೀ  ಮನ್ಕಿ ಬಾತ್"  ಕಾರ್ಯಕ್ರದಲ್ಲಿ ಆಕಾಶವಾಣಿ ಮೈಸೂರಿನ ಸಾಧನೆಗಳನ್ನು ಕುರಿತು ಗುಣಗಾನ ಮಾಡಿದರು.  ಮೈಸೂರು ಆಕಾಶವಾಣಿ ನಿಲಯದ ಮೈಸೂರು ಹಬ್ಬವನ್ನು ವೀಕ್ಷಿಸಿದ ಮೈಸೂರಿನ ನಾಗರಿಕರ ಅನಿಸಿಕೆಗಳು   :  -ಸುಮಾ ವಿಜಯಶಂಕರ್, ಎಂ. ಎಸ್ಸಿ.; ಬಿ....

’ಪ್ರಭಾತ್ ಪೇರಿ ಮೆರವಣಿಗೆ ~

ಬಾಲ್ಯದ ದಿನಗಳಲ್ಲಿ ನಾವು ವೀಕ್ಷಿಸಿದ ಪ್ರಭಾತ್ಪೇರಿ ಮೆರವಣಿಗೆ  ನಮಗೆ ಮುದಕೊಟ್ಟ ಸಂದರ್ಭ  ! ೧೯೪೪ ರಲ್ಲಿ, ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ನಾನು ಮತ್ತು ನನ್ನ ತಮ್ಮ ಚಂದ್ರ, ’ಪ್ರಭಾತ್ ಪೇರಿ ಮೆರವಣಿಗೆ ’ಯನ್ನು ಅತಿ ಹತ್ತಿರದಿಂದ ನೋಡಿದ ಪುಣ್ಯವಂತರು. ಆಗ ಎಲ್ಲರಲ್ಲೂ ದೇಶಭಕ್ತಿ, ದೇಶದ ಬಗ್ಗೆ ಅಪಾರಪ್ರೇಮ ಜಾಗೃತವಾಗಿದ್ದ ಕಾಲವದು. ಜನರೆಲ್ಲಾ ಸಾಧ್ಯವಾದಷ್ಟು ಉತ್ತಮವಾದ ನ್ಯಾಯಯುತವಾದ ಕೆಲಸಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬರುವ ಆದಾಯದಲ್ಲೇ ಹೆಚ್ಚು ಆಸೆಪಡದೆ ಜೀವನ ನಿರ್ವಹಣೆ ಮಾಡುತ್ತಿದ್ದ ಕಾಲ. ಅವರೆಲ್ಲಾ ಅಲ್ಪತೃಪ್ತರು. ತಮಗೆ ಬೇಕಾದಷ್ಟನ್ನು ಮಾತ್ರ ಉಪಯೋಗಿಸಿ ಯಾವ ವಸ್ತುವನ್ನೂ ಮನೆಯಲ್ಲಿ ಅತಿಯಾಗಿ ಶೇಖರಿಸದೆ ಸ್ವಚ್ಛ-ಜೀವನಾಪೇಕ್ಷಿಗಳಾಗಿದ್ದರು. ನನಗೆ ಜ್ಞಾಪಕವಿದ್ದಂತೆ, ನನ್ನ ಬಾಲ್ಯದ ದಿನಗಳಲ್ಲೂ ಸ್ವಾತಂತ್ರ್ಯದಿನದಂದು, ಮತ್ತು ಗಣರಾಜ್ಯದಿನದಂದು,  ’ಮಹಾತ್ಮಾ ಗಾಂಧೀಕಿ ಜೈ’, ’ಭಾರತ್ ಮಾತಾಕಿ ಜೈ’ ಎನ್ನುವ ಕೂಗಿನಿಂದ ರಸ್ತೆಗಳಲ್ಲಿ ಬೆಳಗಿನ ವೇಳೆಯಲ್ಲಿ ಬರುವ ’ಪ್ರಭಾತ್ಪೇರಿ’  ಮೆರವಣಿಗೆಯನ್ನು ನಾವು ಕಾತುರದಿಂದ ವೀಕ್ಷಿಸಲು ಸಿದ್ದರಾಗುತ್ತಿದ್ದೆವು.  ಚಿಕ್ಕ ಪಲ್ಲಕ್ಕಿಯಲ್ಲಿ, ರಾಷ್ಟ್ರನಾಯಕರಾಗಿದ್ದ, ಬಾಲಗಂಗಾಧರ್ ತಿಲಕ್, ಗೋಪಾಲಕೃಷ್ಣ ಗೋಖಲೆ,  ಬಾಬು ರಾಜೇಂದ್ರ ಪ್ರಸಾದ್, ಮತ್ತು ಜವಹರ್ ಲಾಲ್  ನೆಹರೂ ರವರ ಚಿತ್ರಪಟಗಳನ್ನಿಟ್ಟು ಅವಕ್ಕೆ ಹಾರಹಾಕ...