Posts

Showing posts from June, 2015

ಪ್ರೊ. ಎಚ್. ಆರ್. ರಾಮಕೃಷ್ಣರಾವ್ ರವರ 80 ನೆಯ ಜನುಮದಿನದ ಹಬ್ಬದ ವರದಿ !

Image
ಪ್ರೊ. ಎಚ್. ಆರ್. ರಾಮಕೃಷ್ಣರಾಯರ  ೮೦ ನೆಯ ವರ್ಷದ ಜನುಮದಿನವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು !                                                     (೩೦ ನೆಯ  ಮೇ, ೨೦೧೫, ಬೆಂಗಳೂರಿನಲ್ಲಿ) ದಕ್ಷಿಣ ಬೆಂಗಳೂರಿನ ಬಸವನಗುಡಿಯ ಪ್ರತಿಷ್ಥಿತ   ‘ಇಂಡಿಯನ್ ಇನ್ಸ್ಟಿ ಟ್ಯೂಟ್  ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ’ ದಲ್ಲಿ ೨೦೧೫ ರ ಮೇ ತಿಂಗಳ ೩೦ ರಂದು ಆಯೋಜಿಸಲಾಗಿದ್ದ  ' ಪ್ರೊ. ಎಚ್. ಆರ್. ರಾಮಕೃಷ್ಣರಾಯರ ೮೦ ನೇ ಹುಟ್ಟು ಹಬ್ಬದ  ಅಭಿನಂದನಾ ಕಾರ್ಯಕ್ರಮ' ಕ್ಕೆ ಅರ್ಥಪೂರ್ಣ ಚಾಲನೆ ನೀಡಿದ್ದು ಇಡೀ ವರ್ಷದ ಕಾರ್ಯಕ್ರಮಗಳೂ ಹೀಗೇ ಸಾಗಿ ರಾಮಕೃಷ್ಣರಾವ್ ಅವರ 80ನೇ ಸಂವತ್ಸರ ನೆನಪಿನಲ್ಲುಳಿಯುವ ವರ್ಷವಾಗಲಿ, ಎಂಬ ಹಾರೈಕೆ ಕುಟುಂಬದ ಎಲ್ಲ ಸದಸ್ಯರದು.  ಕಾರ್ಯಕ್ರಮದ ಶುಭಾರಂಭ ಶ್ರೀಮತಿ. ಲಲಿತಾ ರಾಮಕೃಷ್ಣರ ಕೀರ್ತನೆಯಿಂದ : ನಿಗದಿಯಾದ ಕಾರ್ಯಕ್ರಮ ಸಂಜೆ ೫-೩೦ ಕ್ಕೆ. ಶ್ರೀಮತಿ.  ಲಲಿತಾ ರಾಮಕೃಷ್ಣ ರಾವ್ ರವರ ಧ್ವನಿಮುದ್ರಿತ ಗಾಯನವನ್ನು ಬಳಸಲಾಯಿತು.  ಸೌ. ಲಲಿತಾರವರು ತಮ್ಮ ಪತಿಯಾಗುವ ರಾಮಕೃಷ್ಣರನ್ನು  (ವರ) ಪ್ರಪ್ರಥಮವಾಗಿ  ಭೇಟಿ ಮಾಡಿದ ಸಮಯದಲ್ಲಿ ಹಾಡಿದ ಹಾಡು. (ಕಿಟಕಿಯ ಕತ್ತಲ...