ಸೂರವ್ವ ಮತ್ತು ಬೋರವ್ವ :
ಈಗಂತೂ ಎಲ್ನೋಡಿದ್ರಲ್ಲಿ ಮಿಲ್ಕ್ ಡೈರಿಗಳು ನಮಗೆ ಕಾಣ್ಸುತ್ವೆ.ಹೊಳಲ್ಕೆರೆಯಲ್ಲೂ ಈ ಏರ್ಪಡು ಆಗಿದೆ ಅನ್ಸತ್ತೆ. ನಮ್ಕಾಲ್ದಲ್ಲಿ ಇವೆಲ್ಲಾ ಎಲ್ಬರ್ಬೇಕು ? ನಾನ್ಹೇಳ್ತಿರೋದು ೬೦ ವರ್ಷದ್ ಹಿಂದಿನ್ಮಾತು. ಈಗಂತೂ ಈ ವರ್ಷದ್ ವಿದ್ಯಮಾನ್ಗಳು ಮುಂದಿನ್ವರ್ಷ ಹಳೇದಾಗಿರುತ್ವೆ !
ಸೂರವ್ವ ಬೋರವ್ವ ದ್ವಯರು, (ತಾಯಿಮಗಳು ಇರಬಹುದು, ನಮಗೆ ತಿಳಿಯದು) ಬಹಳಕಾಲ ಅಂದರೆ ಅವರು ಜೀವಿಸಿರುವ ತನಕ ನಮ್ಮ ಮನೆಗೆ ಹಾಲು ಮೊಸರು, ತುಪ್ಪ ತಂದುಕೊಡುತ್ತಿದ್ದರು. ಇಬ್ಬರೂ ನಮ್ಮ ಮನೆಗೆ ಬರುವ ವರ್ತನೆಯವರು. ಪ್ರತಿದಿನವೂ ತಪ್ಪದೆ ಬೆಳಿಗ್ಯೆ, ೬-೩೦ ಕ್ಕೆ ಅವರು ಹಾಜರ್ ! ಮೊದಲು ಸೂರವ್ವ ಬರುತ್ತಿದ್ದಳು. ಆಕೆಗೆ ಆಗಲೇ ವಯಸ್ಸಾಗಿತ್ತು; ಹಾಲು ಕೊಟ್ಟು ಪುಟ್ಟಿಯನ್ನು ಮೇಲೆತ್ತಿ ತಲೆಯಮೇಲೆ ಇರಿಸಿಕೊಳ್ಳುವಾಗ ಉಸ್ಸಪ್ಪ ಎಂದು ಉಸುರುಬಿಡುತ್ತಿದ್ದದ್ದು ಜ್ಞಾಪಕಕ್ಕೆ ಬರುತ್ತದೆ. ಆಗ ನಮ್ಮಮ್ಮ ಪುಟ್ಟಿ ಎತ್ತಲು ಸಹಾಯಮಾಡುತ್ತಿದ್ದರು. .ಬಿದುರಿನ ಪುಟ್ಟಿಯಲ್ಲಿ ಪುಟ್ಟ ಗಡಿಗೆಗಳಲ್ಲಿ ಹಾಲು, ಮೊಸರು, ತರುತ್ತಿದ್ದರು. ತುಪ್ಪ ತಯಾರಾಗಿದ್ದಾಗ ಮಾತ್ರ ಒಂದು ದಿನ ಮೊದಲು ನಮಗೆ ಹೇಳಿ ಮಾರನೇ ದಿನ ತರುತ್ತಿದ್ದರು.
ಎಮ್ಮೆ ಹಾಲು ಸಾಮಾನ್ಯವಾಗಿ ಗಟ್ಟಿಯಾಗಿಯೇ ಇರುತ್ತಿತ್ತು. ಆಕಳ ಹಾಲೂ ಕೇಳಿ ತರಿಸಿಕೊಳ್ಳಬೇಕಾಗಿತ್ತು. ಅರ್ಧಸೇರು ಹಾಲು ಹಾಕಿದ ಮೇಲೆ ಚಟಾಕಿನಲ್ಲಿ ತುಂಬಿ ಹಾಕಿದರೂ ನಮ್ಮಮ್ಮ, ’ ಏನಮ್ಮಾ ತುಂಬಿ ಹಾಕೋದೆಯಿಲ್” ; ’ಇನ್ನೂ ಹಾಕು ಪರವಾಗಿಲ್ಲ,” ಅನ್ನೋದ್ ತಪ್ತಿರ್ಲಿಲ್ಲ. ಅಯ್ಯೋ ಅಮ್ಮ ಎಷ್ಟ್ ಗೋಳ್ಹೊಯ್ಕೋತಾಳಲ್ಲ, ಆಯಮ್ಮನ್ನ ಅಂತಾ ಅನ್ಸೋದು, ನಮ್ಗೆ.
ಒಂದ್ಸಲ ಹಾಲಿನ ವಿಚಾರದ ಬಗ್ಗೆ, ಪರೀಕ್ಷಿಸಲು ಪಕ್ಕದ್ ಮನೆಗೆ ಹೋದ್ರೆ ಅವೃ ನಮ್ಮನ್ ಅಕ್ಕಂದೃ. ಅವರ್ಹತ್ರ ಹಣ ಇಲ್ಲ. ಯಾಕಂದ್ರೆ ಯಾರೂ ನೌಕ್ರಿ ಮಾಡಲ್ಲ. ಹಂಗ್ ನೋಡಕ್ ಹೋದ್ರೆ, ನಮ್ ಮನೆ ಹತ್ರ್ದೋರೆಲ್ಲಾ ರೈತಾಪಿ ಜನ. ದುಡ್ಯಾರ್ ನೋಡ್ದೋರು ಸದ್ಯ ! ತೆಂಗಿನ್ಕಾಯ್ನೋ ಇಲ್ಲ ಹುಣ್ಸೇ ಹಣ್ಣೋ ಮೆಣ್ಸಿನ್ ಕಾಯ್ನೋ ಮಾರಿದ್ಮೇಲೆ ಬಂದ್ ಹಣದಲ್ಲಿ ಜೀವ್ನ ನಡಸ್ಬೇಕು. ಯಾರ್ಹತ್ರಾನೂ ದುಡ್ಡೇ ಕೇಳ್ಬ್ಯಾಡಿ. ಇದು ನಮ್ಮ ಕೋಟೆ ಪರಿಸ್ತಿತಿ ಆದ್ರೆ ಪೇಟೇಲಿ ಇನ್ನೊಂದ್ ಥರ ! ಶೆಟ್ರು ಕೈತುಂಬಾ ಹಣ ಇಟ್ಕೊಂಡೂ ಈ ಬಡ್ಪಾಯ್ಗಳ್ನ ಸತಾಯ್ಸೋರು ! ಒಂದ್ನೇ ತಾರೀಕ್ ಬಂದು ಅದೇನ್ ಬೇಕೋ ಬಟ್ಟೆ ತಗಂಡ್ ಓಗವ್ವ ತಿಳೀತಾ ? ಅನ್ನೋರು. ಒಟ್ನಲ್ಲಿ ಕಾಸ್ಕೊಟ್ ತೊಗೊಳೋರ್ ಕಮ್ಮಿ. ಅದಕ್ಕೆ ಸೂರವ್ವಂಗೆ ನಮ್ಮನೆ ಜನ ಬಾಳ ಇಷ್ಟ ! ಅಪ್ಪ ಒಳ್ಳೇ ಗರಿ-ಗರಿ ನೋಟ್ ಕೊಡೋರು. ಎಷ್ಟೇ ಆಗ್ಲಿ ಆಡೀಟೃ ! ಅದಲ್ದೆ ಶಾನ್ಬೋಗೃ ಬೇರೆ. ಆದ್ರೆ ದೊಡ್ ಶಾನ್ಬೋಗ್ರಲ್ಲ. ಕುಡ್ನೀರ್ಕಟ್ಟೆ, ಚೀರ್ನ್ಹಳ್ಳಿ, ಮತ್ತೆ ಕಸ್ಬಾ ಹಳ್ಳಿಗಳ್ಗೆ ಶಾನ್ಬೋಗೃ ! ವರ್ಷಕ್ ಮುನ್ನೂರ್ ರುಪಾಯ್ ಪೋಟ್ಗೆ.

ಸೇತಣ್ಣ ಹೊಳಲ್ಕೆರೆ ಶಾನ್ಬೋಗೃ. ಒಳ್ಳೇ ಗತ್ತಿನ್ ಮನುಷ್ಯ. ಉತ್ಪತ್ತೀನೂ ಹಂಗೇ ಇತ್ತು. ಜಮೀನಿನ್ ಕ್ರಯ ಪತ್ರ ಬರದ್ರೆ ಸಾಕು ಹಣ ಸಿಗೋದು. ವರ್ಷದ್ ಪೋಟ್ಗೆ ಹಣನೂ ಹೆಚ್ಚು. ಸೂರವ್ವ ಮೊಸ್ರೂ ಹಾಕ್ದಾಗ ನಾನು ಚಿಕ್ಕ್ ವಾಟಿ ತರ್ತಿದ್ದೆ. ಅವಳ್ಮುಂದೆ ಹಿಡೀತಿದ್ದೆ. ಸೂರವ್ವ ಗೊಣ್ಗೋಳು. ಏನವ್ವ ಇದಕ್ಕೂ ಆಕ್ಬೇಕಾ ಅಂತ. ನನ್ ತಮ್ಮನೂ ಚಿಕ್ವಾಟಿ ತರ್ತಿದ್ದ. ಅದಕ್ಕೆ ವಡ್ರಾಗೀಹಿಟ್ಟಿನ್ ಪುಡಿ ಬೆರೆಸ್ಕೊಂಡೂ ಸಕ್ರೆ ಹಾಕ್ಕೊಂಡ್ ತಿನ್ತಿದ್ವಿ. ಪದೇ-ಪದೇ ಹೀಗ್ ಕೊಸರ್ಕೇಳೋದು ಇಷ್ಟಾ ಅಗ್ದಿದೄ ನಾಮೊದ್ಲೇ ಹೇಳ್ದಂಗೆ ತಿಂಗ್ಳ್ ಕೊನೇಗೆ ರೊಕ್ಕ ತಪ್ದಂಗೆ ಕೊಡ್ತಿದ್ವಲ್ಲಾ ಅದಕ್ಕೆ ಹೊಂದ್ಕೊಂಡ್ ಹೋಗೋರು ಪಾಪ ! ಆದೄ ಅಮ್ಮ, ನಮ್ ಪಕ್ಕದ್ ಮನೆ ಪದ್ದಮ್ಮ ಚಿಕ್ಕಮ್ಮ ನೀರ್ಹಾಲು ಅಂತಾ ದಿನಾ ಗೊಣ್ಗೋರು. ಅಪ್ಪನ್ಕಿವಿಗೆ ಬಿದ್ದಾಗ ಹೋಗ್ಲಿ ಬೇರೆ ಯಾರ್ನಾದೄ ಗೊತ್ಮಾಡ್ಕೊಳ್ಳಿ ಅನ್ನೋರು. ವರ್ಷಗಳ್ಗಟ್ಳೆ ವರ್ತ್ನೆ ಮಾಡ್ಕೊಂಡಿರೋರ್ನ ಹಾಗ್ ಸುಮ್ನೆ ತಪ್ಪಸ್ಕ್ಕಾಗತ್ತಾ ನೀವ್ಸುಮ್ನಿರ್ರಿ, ಅನ್ನೋರು ನಮ್ಮಮ್ಮ ! ಹೀಗೆ ಹಾಲಿನ್ ವ್ಯವಹಾರ ಭಾಳಾದಿನ ನಡೀತಿತ್ತು. ಸೂರವ್ವ ತೀರ್ಕೊಂಡ್ಮೇಲೆ, ಬೋರವ್ವ ಕೊಡ್ತಿದ್ಲು. ಅವಳ್ತರುವಾಯ ಆ ತರ್ಹ ತಲೇ ಮ್ಯಾಲೆ ಪುಟ್ಟಿ ಹೊತ್ಗೊಂಡ್ ಮೈಲಿಗಟ್ಲೆ ನಡ್ಕೊಂಡ್ ಬರೋ ಹೆಣ್ಮಕ್ಳು ಇಲ್ದಂಗಾಯ್ತು. ಗಂಡಸ್ರ್ಗಾಗ್ತಿರ್ಲಿಲ್ಲ, ಈ ಕೆಲ್ಸ !
Comments