ಸೂರವ್ವ ಮತ್ತು ಬೋರವ್ವ :
ಈಗಂತೂ ಎಲ್ನೋಡಿದ್ರಲ್ಲಿ ಮಿಲ್ಕ್ ಡೈರಿಗಳು ನಮಗೆ ಕಾಣ್ಸುತ್ವೆ.ಹೊಳಲ್ಕೆರೆಯಲ್ಲೂ ಈ ಏರ್ಪಡು ಆಗಿದೆ ಅನ್ಸತ್ತೆ. ನಮ್ಕಾಲ್ದಲ್ಲಿ ಇವೆಲ್ಲಾ ಎಲ್ಬರ್ಬೇಕು ? ನಾನ್ಹೇಳ್ತಿರೋದು ೬೦ ವರ್ಷದ್ ಹಿಂದಿನ್ಮಾತು. ಈಗಂತೂ ಈ ವರ್ಷದ್ ವಿದ್ಯಮಾನ್ಗಳು ಮುಂದಿನ್ವರ್ಷ ಹಳೇದಾಗಿರುತ್ವೆ ! ಸೂರವ್ವ ಬೋರವ್ವ ದ್ವಯರು, (ತಾಯಿಮಗಳು ಇರಬಹುದು, ನಮಗೆ ತಿಳಿಯದು) ಬಹಳಕಾಲ ಅಂದರೆ ಅವರು ಜೀವಿಸಿರುವ ತನಕ ನಮ್ಮ ಮನೆಗೆ ಹಾಲು ಮೊಸರು, ತುಪ್ಪ ತಂದುಕೊಡುತ್ತಿದ್ದರು. ಇಬ್ಬರೂ ನಮ್ಮ ಮನೆಗೆ ಬರುವ ವರ್ತನೆಯವರು. ಪ್ರತಿದಿನವೂ ತಪ್ಪದೆ ಬೆಳಿಗ್ಯೆ, ೬-೩೦ ಕ್ಕೆ ಅವರು ಹಾಜರ್ ! ಮೊದಲು ಸೂರವ್ವ ಬರುತ್ತಿದ್ದಳು. ಆಕೆಗೆ ಆಗಲೇ ವಯಸ್ಸಾಗಿತ್ತು; ಹಾಲು ಕೊಟ್ಟು ಪುಟ್ಟಿಯನ್ನು ಮೇಲೆತ್ತಿ ತಲೆಯಮೇಲೆ ಇರಿಸಿಕೊಳ್ಳುವಾಗ ಉಸ್ಸಪ್ಪ ಎಂದು ಉಸುರುಬಿಡುತ್ತಿದ್ದದ್ದು ಜ್ಞಾಪಕಕ್ಕೆ ಬರುತ್ತದೆ. ಆಗ ನಮ್ಮಮ್ಮ ಪುಟ್ಟಿ ಎತ್ತಲು ಸಹಾಯಮಾಡುತ್ತಿದ್ದರು. .ಬಿದುರಿನ ಪುಟ್ಟಿಯಲ್ಲಿ ಪುಟ್ಟ ಗಡಿಗೆಗಳಲ್ಲಿ ಹಾಲು, ಮೊಸರು, ತರುತ್ತಿದ್ದರು. ತುಪ್ಪ ತಯಾರಾಗಿದ್ದಾಗ ಮಾತ್ರ ಒಂದು ದಿನ ಮೊದಲು ನಮಗೆ ಹೇಳಿ ಮಾರನೇ ದಿನ ತರುತ್ತಿದ್ದರು. ಎಮ್ಮೆ ಹಾಲು ಸಾಮಾನ್ಯವಾಗಿ ಗಟ್ಟಿಯಾಗಿಯೇ ಇರುತ್ತಿತ್ತು. ಆಕಳ ಹಾಲೂ ಕೇಳಿ ತರಿಸಿಕೊಳ್ಳಬೇಕಾಗಿತ್ತು. ಅರ್ಧಸೇರು ಹಾಲು ಹಾಕಿದ ಮೇಲೆ ಚಟಾಕಿನಲ್ಲಿ ತುಂಬಿ ಹಾಕಿದರೂ ನಮ್ಮಮ್ಮ, ’ ಏನಮ್ಮಾ ತುಂಬಿ ಹಾಕೋದೆಯಿಲ್” ; ’ಇನ್ನೂ ಹಾಕು...