Posts

Showing posts from 2017

Shri. Chitradurga Mahadev Bhatt, Bombay's one of the Great Yoga teachers during 1950s to 1980s !

Image
Shri. Chitradurga Mahadev Bhatt. Bombay's one of the Great Yoga teachers during 1950s to 1980s ! ಪ್ರಸಿದ್ಧ ಯೋಗಾಚಾರ್ಯ, ಹಾಗೂ ಸಂಸ್ಕೃತ  ಪಂಡಿತರಾಗಿದ್ದ  ಚಿತ್ರದುರ್ಗ ಮಹಾದೇವ ಭಟ್  , 'ಸಿ. ಎಂ. ಭಟ್,' ಎಂದೇ  ತಮ್ಮ ಗೆಳೆಯರಿಗೆ ಹಾಗೂ  ಸಹೋದ್ಯೋಗಿಗಳಿಗೆ ಚಿರ ಪರಿಚಿತರಾಗಿದ್ದರು.   ಚಿತ್ರದುರ್ಗ  ಮಹದೇವ್ ಭಟ್ಟರು, ಗುಂಡಾ ಭಟ್ಟರ ೬ ಜನ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. ಗಂಡು ಮಕ್ಕಳು : ೧. ಪುರುಷೋತ್ತಮ್  ಜೋಯಿಸ್, ೨. ಮಹಾದೇವ್ ಜೋಯಿಸ್, ೩. ಶ್ರೀನಿವಾಸ್ ಜೋಯಿಸ್,  ಹೆಣ್ಣು ಮಕ್ಕಳು : ೧. ಶಾರದಮ್ಮ, ೨. ಮೀನಾಕ್ಷಮ್ಮ ೩. ರತ್ನಮ್ಮ.   ಗುಂಡಾ ಭಟ್ಟರು ಚಿತ್ರದುರ್ಗ ಮತ್ತು ಹತ್ತಿರದ ಗ್ರಾಮಗಳಲ್ಲಿ ಪೌರೋಹಿತ್ಯವನ್ನು ತಮ್ಮ ವೃತ್ತಿಯಾಗಿ ಪಾಲಿಸುತ್ತಿದ್ದರು. ಅವರು ಸಂಸ್ಕೃತ ಹಾಗೂ ಜ್ಯೋತಿಷ ಶಾಸ್ತ್ರದಲ್ಲಿ ಪ್ರಕಾಂಡ ಪಂಡಿತರು.  ಮಹಾದೇವ ಜೋಯಿಸ್ ರವರಿಗೆ  ಮಹದೇವ್ ಭಟ್ಟರೆಂದು ಹೆಸರು ಬರಲು ಕಾರಣ;    ಇದಕ್ಕೆ ಒಂದು ಚಿಕ್ಕ ಕತೆಯಿದೆ. ಮಹಾದೇವ ಜೋಯಿಸ್ ತಮ್ಮ ೧೨ ನೆಯ ವಯಸ್ಸಿನಲ್ಲೇ ಸಂಸ್ಕೃತ ಕಲಿಯಲು ಮೈಸೂರಿನ ಸಂಸ್ಕೃತ ಪಾಠಶಾಲೆಗೆ ಸೇರಿಕೊಂಡರು. ಅಲ್ಲಿ ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದ ತರುವಾಯ ಮೈಸೂರಿನ ರಾಜಮನೆತನದ ಸಂಸ್ಕೃತ ವಿದ್ಯಾಶಾಲೆಗಳಲ್ಲಿ ಶಿಕ್ಷಕರಾ...