ನಿನ್ನೆ ಇವತ್ತಿನ ಹೊಳಲ್ಕೆರೆ, ಮತ್ತು ಹೊಳಲ್ಕೆರೆ ವಾಸಿಗಳಾಗಿದ್ದ ಜನರ ಫೋಟೋಗಳು .....
ಚಿತ್ರದಲ್ಲಿ ’ಲಾಲಿಪಾಪ್,’ ತಿಂತಿರೋ ಮುದ್ದು ಮಗುಯಾವುದೋ ಹೇಳಿರಮ್ಮ...ಅವರಮ್ಮ, ಕಿರಣ್ ಮತ್ತು ರವೀಂದ್ರ, ಬೊಂಬಾಯಿನ ಶಿವಾಜಿ ಪಾರ್ಕನ ಉದ್ಯಾನವನದ ಕಲ್ಲುಬೆಂಚಿನ ಮೇಲೆ... ನನ್ನ ಆಫೀಸಿನಲ್ಲಿ ವಾರ್ಷಿಕ ಕ್ಲಬ್ ನ ಸಮಾರಂಭದ ದಿನದಂದು, ನಡೆದ, ’ಫ್ಯಾನ್ಸಿ ಕ್ಲಬ್ ಸ್ಪರ್ಧೆ’ ಯಲ್ಲಿ, ನಮ್ಮ ರವಿ ’ಮಹಾರಾಜನ ಡ್ರೆಸ್ ’ ನಲ್ಲಿ ಇರುವುದು. ನನ್ನ ಬೇರೆ ಗೆಳೆಯರ ಮಕ್ಕಳೂ ಇದರಲ್ಲಿ ಭಾಗವಹಿಸಿದ್ದರು. ಎಲ್ಲರಿಗೂ ಪ್ರಶಸ್ತಿ ಕೊಡಲಾಯಿತು.... ಈಗ ಎಲ್ಲರಿಂದಲೂ 'ಪ್ರಸನ್ನಗಣಪತಿ' ಯೆಂದು ಕರೆಸಿಕೊಳ್ಳುತ್ತಿರುವ ಗಣಪತಿಯನ್ನು ನನ್ನ ಬಾಲ್ಯದ ಸಮಯದಲ್ಲಿ 'ತೂಗುತಲೆ ಗಣಪ್ಪ' ನೆಂಬ ಹೆಸರಿನಿಂದ ಕರೆಯುತ್ತಿದ್ದರು, ಅಂತ ನಾನು ನೆನೆಸಿಕೊಳ್ಳುವುದು. ಏಕೆಂದರೆ, ನಮ್ಮಪ್ಪ ಗಣಪತಿಯ ವಿಚಾರ ಬಂದಾಗಲೆಲ್ಲಾ ’ ತೂಗುತಲೆ ಗಣಪ್ಪ ಹೇಗೆ ತಲೆತೂಗುತ್ತಿದ್ದನು,” ಎನ್ನುವ ಬಗ್ಗೆ ಅವರ ತಾಯಿಯವರು ಹೇಳಿದ, ಸವಿಸ್ತಾರವಾದ, ಹಾಗೂ ಸ್ವಾರಸ್ಯಕರವಾದ ಕಥೆಯನ್ನು ಹೇಳುತ್ತಿದ್ದರು. ’ಅದು ಸತ್ಯವೇ ಇಲ್ಲವೇ,”ಎನ್ನುವ ಬಗ್ಗೆ ನಮ್ಮ ಊರಿನ ಜನ ತಲೆಕೆಡಸಿಕೊಳ್ಳುತ್ತಿರಲಿಲ್ಲ. ಶ್ರದ್ಧೆ, ಭಕ್ತಿ, ನಂಬಿಕೆಗಳು, ಅವರ ತನುಮನಗಳಲ್ಲಿ ರಕ್ತ, ಉಸುರಿನಷ್ಟು ಗಾಢವಾಗಿ ಸೇರಿಹೋಗಿತ್ತು. ಇವತ್ತಿಗೂ ದೇವರ ವಿಚಾರಬಂದಾಗ ಸ್ಥಳಮಹಾತ್ಮೆಗಳೇನೆ ಇರಲಿ, ಅದನ್ನು ಸವಿಸ್ತಾರವಾಗಿ ಕೇಳಿ ತಮ್ಮ ಕಾಣಿಕೆಯೊಂದಿಗೆ, ಪೂಜೆ ಪುನಸ್ಕಾರಗಳನ್ನು ನೆರೆವೇರಿಸುವುದು, ಅಲ್ಲಿನ...