೬೫ ವರ್ಷಗಳ ಹಿಂದೆ ಹೇಗಿದ್ದಿರಬಹುದು ನಮ್ಮ ಹೊಳಲ್ಕೆರೆ !
೬೫ ವರ್ಷಗಳ ಹಿಂದೆ ಹೇಗಿದ್ದಿರಬಹುದು ನಮ್ಮ ಹೊಳಲ್ಕೆರೆ ! ನಾನು ಬಹುಶಃ ೩ ನೇ ಕ್ಲಾಸ್ ನಲ್ಲಿದ್ದಾಗಿನಿಂದ ಸ್ವಲ್ಪ ಜ್ಞಾಪಕ ಬರೋ ವಿಚಾರಗಳನ್ನ ಅಂದರೆ ಉದಾಹರಣೆಗೆ, ನಾನು ನೋಡಿದ್ದು, ನಮ್ಮಮ್ಮ ಹೇಳಿದ್ದು ಅಂಥಾವ್ನ ಇಲ್ಲಿ ದಾಖಲಿಸಿದರೆ ಸರಿ ಅನ್ಸುತ್ತೆ, ಅಂತ ಈ ಬ್ಲಾಗ್ ಬರಿಯಕ್ಕೆ ಶುರುಮಾಡಿದೆ. ಒಟ್ನಲ್ಲಿ ಅಂಥಾ ಹೇಳ್ಕೊಳ್ಳೊ ಪರಿಸರವೇನು ಅಲ್ಲ. ನಮ್ಮ ಅಪ್ಪ ಬೊಂಬಾಯ್ನಲ್ಲಿ ಕೆಲ್ಸ ಮಾದ್ತಿದ್ರು. ನಮ್ಮಜ್ಜ ವೆಂಕಟನಾರಾಯನಜ್ಜನವರ ಆಸೆಯಂತೆ ಬೊಂಯಿ ಬಿಟ್ಟಮೇಲೆ ವಾಪಸ್ ಹೊಳಲ್ಕೆರೆಗೇ ಹೋದೃ. ಶ್ಯಾನುಭೋಗಿಕೆ ವಂಶಪಾರಂಪರ್ಯವಾಗಿ ನಮ್ಮ ವಂಶದವರು ನಡೆಸಿಕೊಂಡು ಬರುತ್ತಿದ್ದರು. ನಮ್ಮ ದೊಡ್ಡಪ್ಪ ಸರ್ಕಾರಿ ನೌಕರಿ-ಶಿರಸ್ತೇದಾರರಾಗಿದೃ. ನಮ್ಮ ಚಿಕ್ಕಪ್ಪ, ಹೊಳಲ್ಕೆರೆಯ ಮುನಿಸಿಪಲ್ ಆಫೀಸ್ ನಲ್ಲಿ ಅಧಿಕಾರಿಯಾಗಿದ್ದರು. ಅವರಿಗೆ ಮಾನಸಿಕಸೌಖ್ಯವಿಲ್ಲದೇ, ಯಾವುದರಲ್ಲೂ ಅವರು ಅಷ್ಟು ಆಸಕ್ತಿವಹಿಸುತ್ತಿರಲಿಲ್ಲ. ಹಾಗಾಗಿ ನಮ್ಮ ವೆಂಕಟನಾರಾಯಣ ಜ್ಜ ನವರು, ಬೊಂಬಾಯಿನಲ್ಲಿ ವಿದೇಶಿ ಸಂಸ್ಥೆ, ’ವಾಲ್ ಕಾಟ್ ಬ್ರದರ್ಸ್ ಕಂ. ಯಲ್ಲಿ ಕೆಲಸದಲ್ಲಿದ್ದ ನಮ್ಮಪ್ಪ ರಂಗರಾಯರನ್ನು ಊರಿಗೆ ಬರಹೇಳಿದರು. ಹಾಗಾಗಿ, ಹೊಳಲ್ಕೆರೆಯ ವಾಸ ನಮಗೆಲ್ಲಾ ಆಗಿದ್ದು ! ಹೊಳಲ್ಕೆರೆಯಲ್ಲಿ ವಾಸವಾಗಿದ್ರು- ನಮ್ಮಜ್ಜ, ಮುತ್ತಜ್ಜ . ಅಲ್ಲಿಯೇ ಒಂದು ಉತ್ತಮ ಜೀವನವನ್ನ ಕಂಡಿದ್ರು, ಅನ್ನ...