ನಿನ್ನೆ ಇವತ್ತಿನ ಹೊಳಲ್ಕೆರೆ, ಮತ್ತು ಹೊಳಲ್ಕೆರೆ ವಾಸಿಗಳಾಗಿದ್ದ ಜನರ ಫೋಟೋಗಳು .....

ಚಿತ್ರದಲ್ಲಿ ’ಲಾಲಿಪಾಪ್,’ ತಿಂತಿರೋ ಮುದ್ದು ಮಗುಯಾವುದೋ ಹೇಳಿರಮ್ಮ...ಅವರಮ್ಮ, ಕಿರಣ್ ಮತ್ತು ರವೀಂದ್ರ, ಬೊಂಬಾಯಿನ ಶಿವಾಜಿ ಪಾರ್ಕನ ಉದ್ಯಾನವನದ ಕಲ್ಲುಬೆಂಚಿನ ಮೇಲೆ...
ನನ್ನ ಆಫೀಸಿನಲ್ಲಿ ವಾರ್ಷಿಕ ಕ್ಲಬ್ ನ ಸಮಾರಂಭದ ದಿನದಂದು, ನಡೆದ,  ’ಫ್ಯಾನ್ಸಿ ಕ್ಲಬ್ ಸ್ಪರ್ಧೆ’  ಯಲ್ಲಿ, ನಮ್ಮ ರವಿ ’ಮಹಾರಾಜನ ಡ್ರೆಸ್  ’ ನಲ್ಲಿ ಇರುವುದು. ನನ್ನ ಬೇರೆ ಗೆಳೆಯರ ಮಕ್ಕಳೂ ಇದರಲ್ಲಿ ಭಾಗವಹಿಸಿದ್ದರು. ಎಲ್ಲರಿಗೂ ಪ್ರಶಸ್ತಿ ಕೊಡಲಾಯಿತು....
ಈಗ ಎಲ್ಲರಿಂದಲೂ 'ಪ್ರಸನ್ನಗಣಪತಿ' ಯೆಂದು ಕರೆಸಿಕೊಳ್ಳುತ್ತಿರುವ ಗಣಪತಿಯನ್ನು ನನ್ನ ಬಾಲ್ಯದ ಸಮಯದಲ್ಲಿ 'ತೂಗುತಲೆ ಗಣಪ್ಪ' ನೆಂಬ ಹೆಸರಿನಿಂದ ಕರೆಯುತ್ತಿದ್ದರು, ಅಂತ ನಾನು ನೆನೆಸಿಕೊಳ್ಳುವುದು. ಏಕೆಂದರೆ, ನಮ್ಮಪ್ಪ ಗಣಪತಿಯ ವಿಚಾರ ಬಂದಾಗಲೆಲ್ಲಾ ’ ತೂಗುತಲೆ ಗಣಪ್ಪ ಹೇಗೆ ತಲೆತೂಗುತ್ತಿದ್ದನು,” ಎನ್ನುವ ಬಗ್ಗೆ ಅವರ ತಾಯಿಯವರು ಹೇಳಿದ, ಸವಿಸ್ತಾರವಾದ, ಹಾಗೂ  ಸ್ವಾರಸ್ಯಕರವಾದ ಕಥೆಯನ್ನು ಹೇಳುತ್ತಿದ್ದರು. ’ಅದು ಸತ್ಯವೇ ಇಲ್ಲವೇ,”ಎನ್ನುವ ಬಗ್ಗೆ ನಮ್ಮ ಊರಿನ ಜನ ತಲೆಕೆಡಸಿಕೊಳ್ಳುತ್ತಿರಲಿಲ್ಲ. ಶ್ರದ್ಧೆ,  ಭಕ್ತಿ, ನಂಬಿಕೆಗಳು, ಅವರ ತನುಮನಗಳಲ್ಲಿ ರಕ್ತ, ಉಸುರಿನಷ್ಟು ಗಾಢವಾಗಿ ಸೇರಿಹೋಗಿತ್ತು. ಇವತ್ತಿಗೂ ದೇವರ ವಿಚಾರಬಂದಾಗ ಸ್ಥಳಮಹಾತ್ಮೆಗಳೇನೆ ಇರಲಿ, ಅದನ್ನು ಸವಿಸ್ತಾರವಾಗಿ ಕೇಳಿ ತಮ್ಮ ಕಾಣಿಕೆಯೊಂದಿಗೆ, ಪೂಜೆ ಪುನಸ್ಕಾರಗಳನ್ನು ನೆರೆವೇರಿಸುವುದು, ಅಲ್ಲಿನ ಜನರ ಪರಿಪಾಠವಾಗಿದೆ.
ಚಿತ್ರದಲ್ಲಿ ನಾನು ಮಗುವನ್ನು ಎತ್ತಿಕೊಂಡಿದ್ದೇನೆ  (ಬಹುಶಃ ಶ್ರೀರಂಗ ಇರಬಹುದೇನೊ) ನಮ್ಮಣ್ಣ ಕಿಟ್ಟಣ್ಣ ಬಯಲು ತೂಗ್ತಲೆ ಗಣಪನಿಗೆ ದೀಪಹಚ್ಚಲು ಗಾಳಿಬರದಂತೆ ತಲೆಯಮೇಲೆ ಮತ್ತು ಹಣತೆಯಮೇಲೆ ಟವಲ್ ನ್ನು ಮುಚ್ಚಿದ್ದಾನೆ. ನಮ್ಮ ಗುಡಿ ಗೋಪಾಲಣ್ಣನವರು ಅರ್ಚಕರು, ಆದಿನಗಳಲ್ಲಿ...

ದಕ್ಷಿಣ  ಭಾರತದ ಜನರೆಲ್ಲಾ ದೈವಭಕ್ತಿಯಲ್ಲಿ ಒಬ್ಬರಿಗಿಂತ ಒಬ್ಬರು ಮುಗಿಲು. ಹಾಗೆ ನೋಡಿದರೆ, ಉತ್ತರ ಭಾರತೀಯರೇನು ಕಡಿಮೆಯೇ ?  ಭಾರತೀಯರೆಲ್ಲಾ  ಹೀಗೆನೆ. ತಮಿಳರು, ಆಂಧ್ರದವರು, ಮತ್ತು ಅಲ್ಪಸ್ವಲ್ಪ ಕೇರಳೀಯರು ಸಹಿತ. ನಮ್ಮ ಮಂಗಳೂರಿನ ಗೆಳೆಯ ಬಾಂಧವರು ಇನ್ನೂ ಪ್ರೇತ, ದೆವ್ವ ಮತ್ತಿತರ ನಂಬಿಕೆಗಳನ್ನು ಪರಿಪಾಲಿಸುತ್ತಿದ್ದಾರೆ. ಬೊಂಬಾಯಿನ ಕುರ್ಲಾ-ಬಾಂದ್ರ ಪಾಶ್  ಲೊಕ್ಯಾಲಿಟಿ ಯಲ್ಲಿ ಭಾರಿ ಬಹುಮಹಡಿಯ ಮನೆಯ,  ೯ ನೇ ಅಂತಸ್ತಿನಲ್ಲಿ ವಾಸಿಸುತ್ತಿರುವ,  ನಮ್ಮ ಕುಂದಾಪುರದ ಗೆಳೆಯರೊಬ್ಬರ ಮನೆಯವರು, ಇಂದಿಗೂ ಹಲ್ಲಿ ಬಿದ್ದ ವಿಚಾರದ ಬಗ್ಗೆ ದೂರವಾಣಿಯಲ್ಲಿ ನನ್ನ ಹೆಂಡತಿಯನ್ನು ವಿಚಾರಿಸುವುದು ನಡೆದೇ ಇದೆಯೆಂದರೆ ಆಶ್ಚರ್ಯವಾಗುತ್ತದೆ.
ಶ್ರೀ ಆಂಜನೇಯ ಸ್ವಾಮಿಯ ವಿಗ್ರಹ, ವನ್ನು ನಾವು ಚಿಕ್ಕವರಾಗಿದ್ದಾಗಿನಿಂದ ಆರಾಧಿಸುತ್ತಾಬಂದಿದ್ದೇವೆ. ಆಗ ಈ ಗುಡಿಯ ನಿರ್ಮಾಣವಾಗಿರಲಿಲ್ಲ. ...
ಈಗಿನ  ಹೊಳಲ್ಕೆರೆಯ ಪ್ರಸನ್ನ ಗಣಪತಿಯ ಮಂದಿರ ’ ದ ದೃಷ್ಯ.....

ಚಿ. ಶ್ರೀರಂಗ ಹುಟ್ಟಿದಾಗ, ಅವನು ನಮ್ಮೆಲ್ಲರ ಕಣ್ಮಣಿ ಮಗುವಾಗಿದ್ದ. ರಾಮಕೃಷ್ಣನಿಗೆ ಅವನನ್ನು ಕಂಡರೆ ಪ್ರಾಣ. ನಮ್ಮೆಲ್ಲರಿಗೂ ಸಹಿತ...
ಅಪ್ಪ ಮತ್ತು ಅವರ ಗೆಳೆಯರು....
ನಮ್ಮ ’ಹೊಳಲ್ಕೆರೆಯ ಪ್ರಸನ್ನ ಗಣಪತಿ ಮಂದಿರ ”.
ಇದು,  ತೀರ-ತೀರ  ಇತ್ತೀಚಿನ ಫೋಟೋ ಅಂದರೆ,  ೨೦೧೦ ರ,  ಏಪ್ರಿಲ್ ತಿಂಗಳ ಮೊದಲನೆಯ ವಾರದಲ್ಲಿ  ನಾವು ಪ್ರಕಾಶನ ಪುಣೆಯ ಮನೆಗೆ ಹೋಗಿದ್ದಾಗ ತೆಗೆದದ್ದು...

Comments

Buccaneer said…
Appa, brilliant writing and compilation. Photographs neatly framed!

Love

Prakash
Unknown said…
In the first pic is it ravi or kiran mirle?

Popular posts from this blog

ತಾಯಿಯಂತೆ ಮಗಳು ನೂಲಿನಂತೆ ಸೀರೆ !

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !

Shri. Chitradurga Mahadev Bhatt, Bombay's one of the Great Yoga teachers during 1950s to 1980s !