Posts

Showing posts from 2023

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !

Image
ನನ್ನ ಜೀವನದಲ್ಲಿ ಗಾಢವಾದ ಪ್ರಭಾವ ಬೀರಿದ ಕೃತಿಗಳಲ್ಲಿ ಶ್ರೀಯುತ ಎಸ್. ಎಲ್. ಭೈರಪ್ಪನವರ 'ಭಿತ್ತಿ' ಮತ್ತು 'ವಂಶವೃಕ್ಷ' .  ನನ್ನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಇವುಗಳಲ್ಲಿ ಉತ್ತರ ಸಿಕ್ಕಿದೆ. ಹಾಗೆಯೇ ಇವರ ಇತರ ಕೃತಿಗಳನ್ನೂ ಬಹಳ ಆಸಕ್ತಿಯಿಂದ ಓದಿದ್ದೇನೆ. ಓದಿ ಹಲವರಿಗೆ ಕೇಳಿಸಿದ್ದೇನೆ. ಇಂತಹಾ ಮೇರು ವ್ಯಕ್ತಿತ್ವದ ಹಿರಿಯರನ್ನು ಕಾಣಬೇಕು, ಮಾತನಾಡಬೇಕು ಎಂಬ ಆಸೆ ಬಹಳ ದಿನಗಳಿಂದ ಇತ್ತು. ಹಿಂದೊಮ್ಮೆ ಕಂಡಿದ್ದರೂ ಸಮಾರಂಭದಲ್ಲಿ. ಅದೂ ದೂರದಿಂದ. ಮಾತನಾಡಿದ್ದರೂ ಅದು ದೂರವಾಣಿಯಲ್ಲಿ. ನೇರವಾಗಿ ಅಲ್ಲ. ಈಗ ಈ ಸುಸಂದರ್ಭ ಸಿಕ್ಕಿತು. ಸೋದರ ಮಂಜುನಾಥ್, ನನ್ನನ್ನು ಅವರ ಮನೆಗೆ ಕರೆದೊಯ್ದು ಪರಿಚಯಿಸಿದರು.  ನನಗೆ ನಿಜವಾಗಿಯೂ ಏನೂ ಮಾತನಾಡಲು ಮೊದಲಿಗೆ ತೋಚಲಿಲ್ಲ. ಬಹಳ ಪ್ರೀತಿಯಿಂದ ಕೂಡಿಸಿ ಮಾತನಾಡಿಸಿದರು. ಈಗಿನ ಮಕ್ಕಳ ಶಿಕ್ಷಣದಲ್ಲಿ ಮೌಲ್ಯ, ನೀತಿ ಕಾಣೆಯಾಗುತ್ತಿರುವುದರ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು. ಬಳಸುವ ಭಾಷೆಯ ಬಗ್ಗೆ, ತಮ್ಮ ಕಾದಂಬರಿಗಳ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು. ಫೋಟೋ ತೆಗೆಯಲು ಅನುಮತಿ ನೀಡಿದರು. ಆರೋಗ್ಯ ಸರಿಯಿಲ್ಲದೆ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದರು. ನಾನು ಅವರ ಕಾದಂಬರಿಗಳನ್ನು ಓದಿ ರೆಕಾರ್ಡ್ ಮಾಡಿ ಆಸಕ್ತರಿಗೆ ಕೇಳಿಸುತ್ತಿರುವುದರ ಬಗ್ಗೆ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದರು. ಕಳಿಸಿಕೊಡಲು ಬಾಗಿಲವರೆಗೂ ಬಂದರು. ನಿಜಕ್ಕೂ ಇದೊಂದು ಮಧುರ ಕ್ಷಣ. "ಗೋವಿನ ಕಥೆ"