Posts

Showing posts from 2009

ನನ್ನ ಬಾಲ್ಯದ ದಿನಗಳ ವಿವರಗಳು, ನನ್ನಷ್ಟೆ ಅವ್ಯವಸ್ಥಿತ !

Image
ಚಿತ್ರದಲ್ಲಿ ಮುಂದಿನ ಸಾಲಿನಲ್ಲಿ ಕುಳಿತ ವ್ಯಕ್ತಿಗಳು : ಶ್ರೀ . ಎಚ್. ಆರ್. ರಾಮಕೃಷ್ಣರಾವ್, (ನನ್ನ ಅಣ್ಣ) ಶ್ರೀ. ಪ್ರೊ. ಜಿ. ಪಿ. ರಾಜರತ್ನಂ, ಮತ್ತು ಇನ್ನೊಬ್ಬರು. (ಅವರ ಹೆಸರು ತಿಳಿಯದು) ಬೆಂಗಳೂರಿನ ಸೆಂಟ್ರೆಲ್ ಕಾಲೇಜ್ ನಲ್ಲಿ ಆಗ, ಅತ್ಯಂತ ಹೆಸರಾಗಿದ್ದ, ’ ಸೆಂಟ್ರೆಲ್ ಕಾಲೇಜ್ ಕರ್ನಾಟಕ ಸಂಘ,’ ದಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಯಾದ ನಮ್ಮಣ್ಣ, ರಾಮಕೃಷ್ಣ, ಅಲ್ಲಿನ ಎಲ್ಲ ಪ್ರೊಫೆಸರ್ ಗಳ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದವ ! ಪ್ರೊ. ಜಿ. ಪಿ. ರಾಜರತ್ನಂ, ಪ್ರೊ. ವೀ. ಸಿ. ಅವನ ಪ್ರೀತಿಯ ಗುರುಗಳು ! ಅವರ ಪ್ರಭಾವ ಎಷ್ಟು ಮೈಗೂಡಿಸಿಕೊಂಡಿದ್ದ ಎಂದರೆ, ತಾನು ರಾಜರತ್ನಂ, ಮತ್ತು ವೀ. ಸಿಯವರ ಜಾಗಗಳಲ್ಲಿ ನಿಂತು ಏನಾದರೂ ಹೇಳುತ್ತಿದ್ದಂತೆ, ಅವನು ಭಾವಿಸುತ್ತಿದ್ದ. ಕಂಚಿನ ಕಂಠ ! ಮಾತಿನ ಏರಿಳಿತ, ಮತ್ತು ಗಾಂಭೀರ್ಯ ಮುಂತಾದವುಗಳು ಅವನ ಮೇಲೆ ಅಚ್ಚು ಹೊಯ್ದಂತೆ ನಮಗೆ ಕಾಣಿಸುತ್ತಿತ್ತು. ಇಂದಿಗೂ ಅವನು ಏನಾದರೂ ನಮ್ಮ ಮುಂದೆ ಹೇಳಲು ಕುಳಿತರೆ, ಅದೆಷ್ಠು ಮನಮೋಹಕವಾಗಿ ಹೇಳುತ್ತಾನೋ, ನಮಗಂತೂ ಅವನ ಮಾತು ಕೇಳಲು ಅತಿ ಕಾತುರ ! ಈಗ ಹೃದಯದ ಒಂದೆರಡು ಶಸ್ತ್ರ ಕ್ರಿಯೆಗಳು ಆಗಿದ್ದು, ಡಾ. ಮಾತನಾಡಲು ಬಿಡ್ದಿದೄ  ಹುಟ್ಟುಗುಣ .... ಕೇಳಬೇಕಲ್ಲ... ನಮ್ಮಮ್ಮ ಹೇಳ್ದಂಗೆ, ಅವನ್ ಬಂಡ್ವಾಳ ಎಲ್ಲಾ ಅವ್ನ ಮಾತ್ನೊಳ್ಗೆ ಅಲ್ವೆ ?  ಒನ್ನೊಂದ್ ಸರಿ, ಸರಿನ ಸುಳ್ಳು ಅನ್ಸೊಮಟ್ಟಿಗೆ ಹೇಳೋನು. ನಾವೇನಾದರು, ಸುಳ್ಳು ಅನ್ನೊ ವಿಷ್ಯನ ತಿಳಿಸಿ

ಹೊಳಲಿನ ತರಹ ಮೂರೂಕಡೆ ಕೆರೆಗಳಿದ್ದರೂ ಸಹಿತ, ಕುಡಿಯುವ ನೀರಿಗೆ ಯಾವಾಗಲೂ ಬರ !

ನಾನು ನಮ್ಮ ಮಹಾರಾಷ್ಟ್ರದ  ಬೊಂಬಾಯಿನಲ್ಲಿದ್ದಾಗ,  ನಮ್ಮ ಊರು  ಹೊಳಲ್ಕೆರೆಯ ಮಾತು ಬಂದಾಗಲೆಲ್ಲಾ  ಗೆಳೆಯರಮುಂದೆ ಹೆಮ್ಮೆಯಿಂದ ಹೊಳಲಿನ ತರಹ ಎಲ್ಲಾ ಕಡೆಯೂ ನೀರಿದ್ದ ನಿವೇಶನ, ನಮ್ಮೂರು ಹೊಳಲ್ಕೆರೆ-ಎಂದಾಗ ಅವರೆಲ್ಲಾ ತಮ್ಮ ಕಣ್ಣರಳಿಸಿ, " ಅಯ್ಯಾ ಎವಡಿ ಛಾನ್ ಆಹೆನಾ, "ಎಂದು ಉದ್ಗರಿಸಿದಾಗ ಏಕೋ ಸಮಾಧಾನವೆನಿಸಲಿಲ್ಲ. ಏಕೆಂದರೆ ಬಹಳ ವರ್ಷಗಳನಂತರ ನಾವು ಅನುಭವಿಸಿದ ನೀರಿನ ಬವಣೆ ಏಕೋ ಮನಸ್ಸಿನಿಂದ ಜಾರಿ, ಕೇವಲ ಮಾತೃ ಭೂಮಿಯ ಪ್ರೀತಿ ಆಜಾಗವನ್ನು ಆಕ್ರಮಿಸಿತ್ತು !

೬೫ ವರ್ಷಗಳ ಹಿಂದೆ ಹೇಗಿದ್ದಿರಬಹುದು ನಮ್ಮ ಹೊಳಲ್ಕೆರೆ !

೬೫ ವರ್ಷಗಳ ಹಿಂದೆ ಹೇಗಿದ್ದಿರಬಹುದು ನಮ್ಮ ಹೊಳಲ್ಕೆರೆ ! ನಾನು ಬಹುಶಃ ೩ ನೇ ಕ್ಲಾಸ್ ನಲ್ಲಿದ್ದಾಗಿನಿಂದ ಸ್ವಲ್ಪ ಜ್ಞಾಪಕ ಬರೋ ವಿಚಾರಗಳನ್ನ ಅಂದರೆ ಉದಾಹರಣೆಗೆ,  ನಾನು ನೋಡಿದ್ದು,  ನಮ್ಮಮ್ಮ ಹೇಳಿದ್ದು ಅಂಥಾವ್ನ ಇಲ್ಲಿ ದಾಖಲಿಸಿದರೆ ಸರಿ ಅನ್ಸುತ್ತೆ, ಅಂತ ಈ ಬ್ಲಾಗ್ ಬರಿಯಕ್ಕೆ ಶುರುಮಾಡಿದೆ. ಒಟ್ನಲ್ಲಿ ಅಂಥಾ ಹೇಳ್ಕೊಳ್ಳೊ ಪರಿಸರವೇನು ಅಲ್ಲ.  ನಮ್ಮ ಅಪ್ಪ ಬೊಂಬಾಯ್ನಲ್ಲಿ ಕೆಲ್ಸ ಮಾದ್ತಿದ್ರು.   ನಮ್ಮಜ್ಜ ವೆಂಕಟನಾರಾಯನಜ್ಜನವರ ಆಸೆಯಂತೆ  ಬೊಂಯಿ  ಬಿಟ್ಟಮೇಲೆ ವಾಪಸ್ ಹೊಳಲ್ಕೆರೆಗೇ ಹೋದೃ.   ಶ್ಯಾನುಭೋಗಿಕೆ ವಂಶಪಾರಂಪರ್ಯವಾಗಿ ನಮ್ಮ ವಂಶದವರು ನಡೆಸಿಕೊಂಡು ಬರುತ್ತಿದ್ದರು. ನಮ್ಮ ದೊಡ್ಡಪ್ಪ ಸರ್ಕಾರಿ ನೌಕರಿ-ಶಿರಸ್ತೇದಾರರಾಗಿದೃ. ನಮ್ಮ ಚಿಕ್ಕಪ್ಪ, ಹೊಳಲ್ಕೆರೆಯ ಮುನಿಸಿಪಲ್ ಆಫೀಸ್ ನಲ್ಲಿ ಅಧಿಕಾರಿಯಾಗಿದ್ದರು. ಅವರಿಗೆ ಮಾನಸಿಕಸೌಖ್ಯವಿಲ್ಲದೇ, ಯಾವುದರಲ್ಲೂ ಅವರು ಅಷ್ಟು ಆಸಕ್ತಿವಹಿಸುತ್ತಿರಲಿಲ್ಲ.  ಹಾಗಾಗಿ ನಮ್ಮ ವೆಂಕಟನಾರಾಯಣ ಜ್ಜ ನವರು, ಬೊಂಬಾಯಿನಲ್ಲಿ ವಿದೇಶಿ ಸಂಸ್ಥೆ, ’ವಾಲ್ ಕಾಟ್ ಬ್ರದರ್ಸ್ ಕಂ. ಯಲ್ಲಿ ಕೆಲಸದಲ್ಲಿದ್ದ ನಮ್ಮಪ್ಪ ರಂಗರಾಯರನ್ನು ಊರಿಗೆ ಬರಹೇಳಿದರು.  ಹಾಗಾಗಿ, ಹೊಳಲ್ಕೆರೆಯ ವಾಸ ನಮಗೆಲ್ಲಾ ಆಗಿದ್ದು ! ಹೊಳಲ್ಕೆರೆಯಲ್ಲಿ ವಾಸವಾಗಿದ್ರು- ನಮ್ಮಜ್ಜ, ಮುತ್ತಜ್ಜ . ಅಲ್ಲಿಯೇ  ಒಂದು ಉತ್ತಮ ಜೀವನವನ್ನ ಕಂಡಿದ್ರು, ಅನ್ನೊದ್ ಮಾತ್ರ ನಿಜ.  ಅವರ ಹತ್ರ, ಹಣ, ಬಂಗಾರ, ಜಮೀನು-ಕಾಣಿ ಏನಿತ್ತೋ ಏನಿ